alex Certify
ಕನ್ನಡ ದುನಿಯಾ       Mobile App
       

Kannada Duniya

ಪತ್ನಿಯ ಕೈಹಿಡಿದುಕೊಳ್ಳಲು ಹೋದ ಟ್ರಂಪ್ ಗೆ ಮತ್ತೆ ಮುಜುಗರ

ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಮ್ಮ ಪತ್ನಿಯ ಕೈಹಿಡಿಯಲು ವಿಫಲ ಯತ್ನ ನಡೆಸಿ ಮತ್ತೆ ಮುಜುಗರಕ್ಕೀಡಾಗಿದ್ದಾರೆ. 2017ರ ಮೇನಲ್ಲಿ ಕೂಡ ಇಂಥದ್ದೇ ಘಟನೆ ನಡೆದಿತ್ತು. ಡೊನಾಲ್ಡ್ ಟ್ರಂಪ್ ಹಾಗೂ ಮೆಲಾನಿಯಾ ಟ್ರಂಪ್ ವೈಟ್ ಹೌಸ್ ನಿಂದ ಓಹಿಯೋಗೆ ಹೊರಟಿದ್ರು.

ಮರೀನ್ ವನ್ ಬೋರ್ಡಿಂಗ್ ಸಂದರ್ಭದಲ್ಲಿ ಇಬ್ಬರೂ ಜೊತೆಯಾಗಿ ವಿಮಾನದತ್ತ ನಡೆದುಕೊಂಡು ಹೋಗುತ್ತಿದ್ರು. ಹಳದಿ ಬಣ್ಣದ ಟೀ ಶರ್ಟ್ ತೊಟ್ಟಿದ್ದ ಮೆಲಾನಿಯಾ, ಮೇಲಿಂದ ಕೋಟ್ ಹೊದ್ದುಕೊಂಡಿದ್ರು. ಪತ್ನಿಯ ಕೈ ಕೋಟ್ ನಲ್ಲಿದೆ ಅಂದುಕೊಂಡು ಟ್ರಂಪ್, ಕೈಹಿಡಿದುಕೊಳ್ಳಲು ಹೋಗಿದ್ದಾರೆ.

ಆದ್ರೆ ಮೆಲಾನಿಯಾ ಕೈ ಕೋಟ್ ನ ಒಳಭಾಗದಲ್ಲಿತ್ತು. ಕೈ ಹಿಡಿಯುವ ವಿಫಲ ಯತ್ನದ ಬಳಿಕ ಟ್ರಂಪ್ ಏನೂ ನಡೆದೇ ಇಲ್ಲ ಎಂಬಂತೆ ವಿಮಾನದತ್ತ ನಡೆದುಕೊಂಡು ಹೋದ್ರು. ಆದ್ರೆ ಈ ಮುಜುಗರದ ಸನ್ನಿವೇಶ ಜಾಲತಾಣಗಳಲ್ಲಿ ಹರಿದಾಡ್ತಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...