alex Certify
ಕನ್ನಡ ದುನಿಯಾ       Mobile App
       

Kannada Duniya

ಟ್ರಂಪ್ ಟಾಯ್ಲೆಟ್ ಪೇಪರ್ ಲಾಂಚ್ ಮಾಡ್ತಿದ್ದಾನೆ ಈ ವಕೀಲ

tr

ಮೆಕ್ಸಿಕೋದ ವಕೀಲರೊಬ್ರು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿರುದ್ಧದ ಹೋರಾಟವನ್ನು ಶೌಚಾಲಯದವರೆಗೂ ಕೊಂಡೊಯ್ದಿದ್ದಾರೆ. ಆಂಟೊನಿಯೋ ಬಟ್ಟಗ್ಲಿಯಾ ಎಂಬ ವಕೀಲ, ಟ್ರಂಪ್ ಬ್ರಾಂಡ್ ನ ಟಾಯ್ಲೆಟ್ ಪೇಪರ್ ಬಿಡುಗಡೆ ಮಾಡಲು ಮುಂದಾಗಿದ್ದಾರೆ. ಈ ಮೂಲಕ ಅಮೆರಿಕದಿಂದ ಗಡಿಪಾರು ಮಾಡಿರುವ ಮೆಕ್ಸಿಕೋದ ವಲಸಿಗರಿಗೆ ಬೆಂಬಲ ಸೂಚಿಸಿದ್ದಾರೆ.

‘ಸಾಫ್ಟ್ ನೆಸ್ ವಿತೌಟ್ ಬಾರ್ಡರ್ಸ್’ ಸ್ಲೋಗನ್ ಅಡಿಯಲ್ಲಿ ಟ್ರಂಪ್ ರ ಕಾರ್ಟೂನ್ ಹೊಂದಿರೋ ಟಾಯ್ಲೆಟ್ ಪೇಪರ್ ಗಳನ್ನು ತಯಾರು ಮಾಡಲಾಗಿದೆ. ಸದ್ಯ ಸಾಮಾಜಿಕ ತಾಣಗಳಲ್ಲೂ ಟ್ರಂಪ್ ಟಾಯ್ಲೆಟ್ ಪೇಪರ್ ವೈರಲ್ ಆಗಿದೆ. ಈ ಟಾಯ್ಲೆಟ್ ಪೇಪರ್ ಉದ್ಯಮದಿಂದ ಬರುವ ಲಾಭದಲ್ಲಿ ಶೇ.30ರಷ್ಟನ್ನು ಆಂಟೊನಿಯೋ, ಮೆಕ್ಸಿಕೋ ವಲಸಿಗರಿಗೆ ನೀಡಲಿದ್ದಾರೆ.

tp-1

ಟ್ರಂಪ್ ಚುನಾವಣಾ ಅಭ್ಯರ್ಥಿಯಾಗಿದ್ದ ಸಂದರ್ಭದಲ್ಲಿ ಮೆಕ್ಸಿಕೋ ಬಗ್ಗೆ ಅವಹೇಳನಕಾರಿ ಕಮೆಂಟ್ ಮಾಡಿದ್ದರು. ಆಗ್ಲೇ ಟ್ರಂಪ್ ವಿರುದ್ಧ ಯಾವುದಾದ್ರೂ ಉತ್ಪನ್ನವನ್ನು ಲಾಂಚ್ ಮಾಡುವ ಆಲೋಚನೆ ಆಂಟೊನಿಯೋಗೆ ಬಂದಿತ್ತು. ಟ್ರಂಪ್ ವಿರುದ್ಧ ಸೇಡು ತೀರಿಸಿಕೊಳ್ಳುತ್ತಿಲ್ಲ, ಪಾಸಿಟಿವ್ ಆಗಿಯೇ ಈ ಯೋಜನೆ ಹಾಕಿಕೊಂಡಿದ್ದೇನೆ ಅಂತಾ ತಿಳಿಸಿದ್ದಾರೆ.

ಮೊದಲು ಉಡುಪು ಅಥವಾ ಶೂ ಲಾಂಚ್ ಮಾಡಲು ಆಂಟೊನಿಯೋ ಮುಂದಾಗಿದ್ದರು. ಆದ್ರೆ ಅದರ ಪೇಟೆಂಟ್ ಅನ್ನು ಬೇರೊಬ್ಬರು ಪಡೆದಿದ್ದರಿಂದ ಟಾಯ್ಲೆಟ್ ಪೇಪರ್ ಸೂಕ್ತ ಅನ್ನೋ ತೀರ್ಮಾನಕ್ಕೆ ಬಂದಿದ್ದಾರೆ. ಇದಕ್ಕಾಗಿ 21,400 ಡಾಲರ್ ಹೂಡಿಕೆ ಮಾಡ್ತಿದ್ದಾರೆ.

 

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...