alex Certify
ಕನ್ನಡ ದುನಿಯಾ       Mobile App
       

Kannada Duniya

ಬದ್ಧ ವೈರಿಗಳಾದ ಟ್ರಂಪ್-ಕಿಮ್ ಜಾಂಗ್ ಮಧ್ಯೆ ದೋಸ್ತಿ…!

ಅಮೆರಿಕ ಹಾಗೂ ಉತ್ತರ ಕೊರಿಯಾ ಬದ್ಧ ವೈರಿಗಳು. ಉತ್ತರ ಕೊರಿಯಾದ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಹಾಗೂ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಧ್ಯೆ ಆಗಾಗ ಮಾತಿನ ಸಮರ ನಡೆಯುತ್ತಲೇ ಇರುತ್ತದೆ.

ಆದ್ರೀಗ ಟ್ರಂಪ್ ಹಾಗೂ ಕಿಮ್ ಜಾಂಗ್ ಉನ್ ನಡುವಣ ಐತಿಹಾಸಿಕ ಮೊದಲ ಭೇಟಿಗೆ ವೇದಿಕೆ ಸಜ್ಜಾಗಿದೆ. ಮೇ ಅಂತ್ಯದ ವೇಳೆಗೆ ಉಭಯ ನಾಯಕರ ಮೊದಲ ಭೇಟಿ ನಡೆಯಲಿದೆ. ಟ್ರಂಪ್ ರನ್ನು ಭೇಟಿಯಾಗಲು ಖುದ್ದು ಕಿಮ್ ಜಾಂಗ್ ಆಸಕ್ತಿ ತೋರಿಸಿದ್ದಾರಂತೆ.

ಅಷ್ಟೇ ಅಲ್ಲ ಅಮೆರಿಕ ಮಾತುಕತೆಗೆ ಒಪ್ಪಿದ್ರೆ ಅಣ್ವಸ್ತ್ರ ಪರೀಕ್ಷೆಯನ್ನು ನಿಲ್ಲಿಸುವುದಾಗಿಯೂ ಕಿಮ್ ಜಾಂಗ್ ಭರವಸೆ ನೀಡಿದ್ದರು. ಹಾಗಾಗಿ ಉತ್ತರ ಕೊರಿಯಾದ ಪ್ರಸ್ತಾಪವನ್ನು ಟ್ರಂಪ್ ಕೂಡ ಸ್ವೀರಿಸಿದ್ದಾರೆ.

ತಮ್ಮಿಬ್ಬರ ಭೇಟಿ ಕುರಿತಂತೆ ಖುದ್ದು ಟ್ರಂಪ್ ಟ್ವೀಟ್ ಮಾಡಿದ್ದಾರೆ. ಅಮೆರಿಕ ಹಾಗೂ ಉತ್ತರ ಕೊರಿಯಾ ನಡುವೆ ಯುದ್ಧವೇ ನಡೆದು ಹೋಗುತ್ತದೆ ಎಂಬ ಆತಂಕ ಸೃಷ್ಟಿಯಾಗಿತ್ತು. ಅದರ ನಡುವೆ ಶಾಂತಿ ಮಾತುಕತೆಗೆ ಉಭಯ ರಾಷ್ಟ್ರಗಳೂ ಸಮ್ಮತಿಸಿರುವುದು ವಿಶೇಷ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...