alex Certify
ಕನ್ನಡ ದುನಿಯಾ       Mobile App
       

Kannada Duniya

ಈ ವಿಷ್ಯದಲ್ಲಿ ಮೋದಿ ಹಿಂದಿಕ್ಕಿದ ಟ್ರಂಪ್

ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಟ್ವೀಟರ್ ನಲ್ಲಿ ಅತಿ ಹೆಚ್ಚು ಫಾಲೋವರ್ ಹೊಂದಿರುವ ನಾಯಕರಾಗಿದ್ದಾರೆ. ಟ್ವೀಪ್ಲೋಮಸಿ ಬಿಡುಗಡೆ ಮಾಡಿದ ವರದಿ ಪ್ರಕಾರ, ಟ್ವೀಟರ್ ನಲ್ಲಿ ಅತಿ ಹೆಚ್ಚು ಫಾಲೋಮಾಡುವ ನಾಯಕರ ಪಟ್ಟಿಯಲ್ಲಿ ಡೊನಾಲ್ಡ್ ಟ್ರಂಪ್ ಮೊದಲ ಸ್ಥಾನದಲ್ಲಿದ್ದಾರೆ. ಭಾರತದ ಪ್ರಧಾನಿ ನರೇಂದ್ರ ಮೋದಿ ಮೂರನೇ ಸ್ಥಾನದಲ್ಲಿದ್ದಾರೆ.

ಮೊದಲ ಸ್ಥಾನದಲ್ಲಿರುವ ಟ್ರಂಪ್ ರನ್ನು ಟ್ವೀಟರ್ ನಲ್ಲಿ 3,97,35,749 ಮಂದಿ ಫಾಲೋ ಮಾಡ್ತಿದ್ದಾರೆ. ಎರಡನೇ ಸ್ಥಾನದಲ್ಲಿ ಪೋಪ್ ಫ್ರಾನ್ಸಿಸ್ ಇದ್ದು ಇವರ ಫಾಲೋವರ್ ಸಂಖ್ಯೆ ಟ್ರಂಪ್ ಗಿಂತ 2 ಲಕ್ಷ ಕಡಿಮೆಯಿದೆ. ಟ್ವೀಟರ್ ನಲ್ಲಿ ಪೋಪ್ ಫ್ರಾನ್ಸಿಸ್ 9 ಅಕೌಂಟ್ ಹೊಂದಿದ್ದಾರೆ. ಬೇರೆ ಬೇರೆ ಭಾಷೆಯಲ್ಲಿ ಅವರ ಅಕೌಂಟ್ ಇದೆ.

ಮೂರನೇ ಸ್ಥಾನದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿಯಿದ್ದಾರೆ. ಅವರ ಫಾಲೋವರ್ಸ್ ಸಂಖ್ಯೆ 3,48,78,753. ಇನ್ಸ್ಟ್ರಾಗ್ರಾಮ್ ನಲ್ಲಿ ಟ್ರಂಪ್ ಗಿಂತ ಮೋದಿ ಫಾಲೋವರ್ಸ್ ಸಂಖ್ಯೆ ಹೆಚ್ಚಿದೆ. ಇನ್ಸ್ಟ್ರಾಗ್ರಾಮ್ ನಲ್ಲಿ 9.7 ಮಿಲಿಯನ್ ಫಾಲೋವರ್ಸ್ ಮೋದಿ ಹೊಂದಿದ್ದರೆ ಟ್ರಂಪ್ ಫಾಲೋವರ್ಸ್ ಸಂಖ್ಯೆ 7.6 ಮಿಲಿಯನ್ ಇದೆ.

ಈ ಪಟ್ಟಿಯಲ್ಲಿ ಭಾರತದ ಪ್ರಧಾನ ಮಂತ್ರಿ ಕಚೇರಿ ಟ್ವೀಟರ್ ಅಕೌಂಟ್ ನಾಲ್ಕನೇ ಸ್ಥಾನದಲ್ಲಿದೆ. ಐದನೇ ಸ್ಥಾನದಲ್ಲಿ ಅಮೆರಿಕಾ ರಾಷ್ಟ್ರಪತಿ ಕಾರ್ಯಾಲಯದ ಟ್ವೀಟರ್ ಅಕೌಂಟ್ ಇದ್ರೆ ಎಂಟನೇ ಸ್ಥಾನದಲ್ಲಿ ಭಾರತದ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಇದ್ದಾರೆ. ಅವ್ರ ಫಾಲೋವರ್ಸ್ ಸಂಖ್ಯೆ 96,16,129 ಇದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...