alex Certify
ಕನ್ನಡ ದುನಿಯಾ       Mobile App
       

Kannada Duniya

ಪ್ರಧಾನಿ ಮೋದಿಗೆ ಹೀಗೆ ಟಾಂಗ್ ಕೊಟ್ರಾ ಟ್ರಂಪ್….?

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಭಾರತದ ಪ್ರಧಾನಿ ನರೇಂದ್ರ ಮೋದಿ ಬಗ್ಗೆ ಮಿಮಿಕ್ರಿ ಮಾಡಿದ್ದಾರೆ. ಅಫ್ಘಾನಿಸ್ತಾನಕ್ಕೆ ಇನ್ನಷ್ಟು ಭದ್ರತಾ ಪಡೆಗಳನ್ನು ಕಳುಹಿಸುವ ಅಮೆರಿಕದ ನಿರ್ಧಾರ ಕುರಿತಂತೆ ನಡೆದ ಮಾತುಕತೆ ವೇಳೆ ಭಾರತೀಯ ಶೈಲಿಯಲ್ಲಿ ಪದಗಳನ್ನು ಉಚ್ಛಾರಣೆ ಮಾಡುವ ಮೂಲಕ ಟ್ರಂಪ್, ಮೋದಿ ಮಿಮಿಕ್ರಿ ಮಾಡಿದ್ದಾರೆ.

ವೈಟ್ ಹೌಸ್ ಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಪ್ರಧಾನಿ ಮೋದಿ, ಅಫ್ಘಾನಿಸ್ತಾನದಲ್ಲಿ ಅಮೆರಿಕ ನಡೆಸುತ್ತಿರುವ ಕ್ಯಾಂಪೇನ್ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಇದೇ ವಿಚಾರಕ್ಕೆ ಸಂಬಂಧಪಟ್ಟಂತೆ ಮಾತನಾಡಿದ ಟ್ರಂಪ್, ಭಾರತೀಯ ಶೈಲಿಯಲ್ಲಿ ಮಾತನಾಡುತ್ತ, ಮೋದಿ ಅವರನ್ನು ಅನುಕರಿಸಿ ತಮಾಷೆ ಮಾಡಿದ್ದಾರಂತೆ.

ಆದ್ರೆ ಈ ಆರೋಪವನ್ನು ವೈಟ್ ಹೌಸ್ ಅಧಿಕಾರಿಗಳು ನಿರಾಕರಿಸಿದ್ದಾರೆ. ಟ್ರಂಪ್ ಅಧ್ಯಕ್ಷೀಯ ಚುನಾವಣೆ ಸಂದರ್ಭದಲ್ಲೂ ‘ಅಬ್ ಕಿ ಬಾರ್ ಟ್ರಂಪ್ ಕಿ ಸರ್ಕಾರ್’ ಎಂಬ ಸ್ಲೋಗನ್ ಉಚ್ಛರಿಸುವ ಮೂಲಕ ಮೋದಿಯನ್ನು ಅಣಕಿಸಿದ್ದರು. ಆದ್ರೆ ಮೋದಿ ತಮ್ಮ ನಿಜವಾದ ಸ್ನೇಹಿತ ಅಂತ ಕೂಡ ಟ್ರಂಪ್ ಬಣ್ಣಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...