alex Certify
ಕನ್ನಡ ದುನಿಯಾ       Mobile App
       

Kannada Duniya

ಮಹತ್ವದ ದಾಖಲೆಗೆ ಸಹಿ ಹಾಕಿದ ಕಿಮ್-ಟ್ರಂಪ್: ಬದಲಾವಣೆ ನಿರೀಕ್ಷೆಯಲ್ಲಿ ನಾಯಕರು

ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಹಾಗೂ ಅಮೆರಿಕಾ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಭೇಟಿ ಮುಕ್ತಾಯವಾಗಿದೆ. ಇಬ್ಬರು ನಾಯಕರು ಮಾತುಕತೆ ಬಳಿಕ ಮಹತ್ವದ ಒಪ್ಪಂದಗಳಿಗೆ ಸಹಿ ಹಾಕಿದ್ದಾರೆ. ನಾಯಕರು ಯಾವ ಒಪ್ಪಂದಕ್ಕೆ ಸಹಿ ಹಾಕಿದ್ದಾರೆಂಬುದನ್ನು ಇನ್ನೂ ಬಹಿರಂಗಪಡಿಸಿಲ್ಲ.

ಕಿಮ್ ಜಾಂಗ್ ಭೇಟಿ ನಂತ್ರ ಮಾತನಾಡಿದ ಟ್ರಂಪ್, ಉತ್ತರ ಕೊರಿಯಾ ಹಾಗೂ ಅಮೆರಿಕಾ ನಡುವಿನ ಸಂಬಂಧ ಬದಲಾಗಲಿದೆ. ಹಿಂದಿನಂತೆ ಇರುವುದಿಲ್ಲ ಎಂದಿದ್ದಾರೆ. ನಾವು ದಾಖಲಾತಿಗೆ ಹಾಕಿರುವ ಸಹಿ ಅಪಾಯಕಾರಿ ವಸ್ತುಗಳಿಂದ ಜನರನ್ನು ಉಳಿಸಲಿದೆ ಎಂದು ಟ್ರಂಪ್ ಹೇಳಿದ್ದಾರೆ.

ಪತ್ರಕರ್ತರ ಪ್ರಶ್ನೆಗೆ ಉತ್ತರವಾಗಿ ಕಿಮ್ ಜಾಂಗ್ ರನ್ನು ಅಮೆರಿಕಾದ ವೈಟ್ ಹೌಸ್ ಗೆ ಆಹ್ವಾನಿಸುತ್ತೇನೆಂದು ಟ್ರಂಪ್ ಹೇಳಿದ್ದಾರೆ. ಈ ವೇಳೆ ಮಾತನಾಡಿದ ಕಿಮ್, ವಿಶ್ವ ದೊಡ್ಡ ಬದಲಾವಣೆ ನೋಡಲಿದೆ ಎಂದಿದ್ದಾರೆ.

ಒಪ್ಪಂದದ ದಾಖಲೆಗೆ ಸಹಿ ಹಾಕುವ ಮೊದಲು ನಾಯಕರಿಬ್ಬರು ಪರಸ್ಪರ ಮಾತುಕತೆ ನಡೆಸಿದ್ರು. ಈ ಮಾತುಕತೆ ಸುಮಾರು 50 ನಿಮಿಷಗಳ ಕಾಲ ನಡೆಯಿತು. ಮೀಟಿಂಗ್ ತುಂಬಾ ಚೆನ್ನಾಗಿ ನಡೆಯಿತು. ಎರಡೂ ದೇಶಗಳ ಸಂಬಂಧ ಉತ್ತಮವಾಗಲಿದೆ ಎಂಬ ವಿಶ್ವಾಸ ನನಗಿದೆ. ಅನೇಕ ಅಡೆತಡೆಗಳನ್ನು ಎದುರಿಸಿ ನಾವು ಭೇಟಿಯಾಗ್ತಿರುವುದು ಖುಷಿ ತಂದಿದೆ ಎಂದು ಟ್ರಂಪ್ ಹೇಳಿದ್ದರು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...