alex Certify
ಕನ್ನಡ ದುನಿಯಾ       Mobile App
       

Kannada Duniya

ವಿಚ್ಛೇದನಕ್ಕಾಗಿ ಅರ್ಜಿ ಹಾಕಿದ್ದಾಳೆ ಟ್ರಂಪ್ ಸೊಸೆ

ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ರ ಹಿರಿಯ ಸೊಸೆ ವಿಚ್ಛೇದನಕ್ಕಾಗಿ ಅರ್ಜಿ ಸಲ್ಲಿಸಿದ್ದಾಳೆ. ಹಿರಿಯ ಪುತ್ರ ಡೊನಾಲ್ಡ್ ಟ್ರಂಪ್ ಜೂನಿಯರ್ ಪತ್ನಿ ವನೆಸ್ಸಾ ಟ್ರಂಪ್, ಡೈವೋರ್ಸ್ ಗಾಗಿ ನ್ಯೂಯಾರ್ಕ್ ನ್ಯಾಯಾಲಯದ ಮೊರೆ ಹೋಗಿದ್ದಾಳೆ.

ವನೆಸ್ಸಾ ರೂಪದರ್ಶಿ ಹಾಗೂ ನಟಿಯಾಗಿದ್ಲು. ಇವರ ಮದುವೆಯಾಗಿ 12 ವರ್ಷಗಳಾಗಿವೆ. ಇಬ್ಬರೂ ಪರಸ್ಪರ ಸಮ್ಮತಿ ಮೇರೆಗೆ ವಿಚ್ಛೇದನ ಪಡೆಯಲು ನಿರ್ಧರಿಸಿರುವುದಾಗಿ ಟ್ರಂಪ್ ಜೂನಿಯರ್ ಹಾಗೂ ವನೆಸ್ಸಾ ಜಂಟಿ ಹೇಳಿಕೆ ನೀಡಿದ್ದಾರೆ.

2005ರಲ್ಲಿ ಇವರ ವಿವಾಹ ನೆರವೇರಿತ್ತು. ದಂಪತಿಗೆ ಐವರು ಮಕ್ಕಳಿದ್ದಾರೆ. ಪರಸ್ಪರರ ಬಗ್ಗೆ ಈಗಲೂ ಅಪಾರ ಗೌರರವಿದೆ ಅಂತಾ ಹೇಳಿಕೊಂಡಿದ್ದಾರೆ. ಅಷ್ಟೇ ಅಲ್ಲ ಇದು ಖಾಸಗಿ ವಿಚಾರವಾಗಿದ್ದರಿಂದ ಹೆಚ್ಚು ಕೆದಕದಂತೆ ಮಾಧ್ಯಮಗಳಲ್ಲಿ ಮನವಿಯನ್ನೂ ಮಾಡಿದ್ದಾರೆ.

 

 

Subscribe Newsletter

Get latest updates on your inbox...

Opinion Poll

  • ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಬಹುಮತ ಪಡೆಯುತ್ತಾ ಬಿಜೆಪಿ...?

    View Results

    Loading ... Loading ...