alex Certify
ಕನ್ನಡ ದುನಿಯಾ       Mobile App
       

Kannada Duniya

ಪಾಕಿಸ್ತಾನವನ್ನು ಹಾಡಿ ಹೊಗಳಿದ ಡೊನಾಲ್ಡ್ ಟ್ರಂಪ್

trump-pak

ಅಮೆರಿಕ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಡೊನಾಲ್ಡ್ ಟ್ರಂಪ್ ಅವರನ್ನು ಅಭಿನಂದಿಸಲು ಪಾಕಿಸ್ತಾನ ಪ್ರಧಾನಿ ನವಾಜ್ ಷರೀಫ್ ಫೋನ್ ಕರೆ ಮಾಡಿದ್ದರು.

ಈ ವೇಳೆ ಹಲವು ವಿಚಾರಗಳ ಬಗ್ಗೆ ಟ್ರಂಪ್ ಹಾಗೂ ನವಾಜ್ ಷರೀಫ್ ಚರ್ಚೆ ನಡೆಸಿದ್ದಾರೆ. ಪಾಕಿಸ್ತಾನದ ಮಹೋನ್ನತ ಸಮಸ್ಯೆಗಳಿಗೆ ಪರಿಹಾರ ಹುಡುಕಲು ಸಹಕಾರ ನೀಡುವುದಾಗಿ ಈ ವೇಳೆ ಟ್ರಂಪ್ ಭರವಸೆ ನೀಡಿದ್ದಾರೆ. ಯಾವಾಗ ಬೇಕಾದರೂ ನೀವು ಕರೆಮಾಡಿ ನನ್ನ ನೆರವು ಪಡೆದುಕೊಳ್ಳಬಹುದು ಅಂತಾ ಷರೀಫ್ ಗೆ ಆಶ್ವಾಸನೆ ಕೊಟ್ಟಿದ್ದಾರೆ.

ಅಷ್ಟೇ ಅಲ್ಲ, ನವಾಜ್ ಷರೀಫ್ ಒಬ್ಬ ಅದ್ಭುತ ವ್ಯಕ್ತಿ ಅಂತಾನೂ ಹಾಡಿ ಹೊಗಳಿದ್ದಾರೆ. ಪಾಕಿಸ್ತಾನ ಕೂಡ ಒಂದು ಅದ್ಭುತ ರಾಷ್ಟ್ರ, ಅಲ್ಲಿ ಉತ್ತಮ ಅವಕಾಶಗಳಿವೆ ಎಂದಿರುವ ಟ್ರಂಪ್, ಪಾಕಿಸ್ತಾನೀಯರು ಅತ್ಯಂತ ಬುದ್ಧಿವಂತ ಜನ ಅಂತಾ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಈ ವೇಳೆ ನವಾಜ್ ಷರೀಫ್, ಅವರನ್ನು ಪಾಕಿಸ್ತಾನಕ್ಕೆ ಆಹ್ವಾನಿಸಿದ್ದಾರೆ. ತಾವು ಕೂಡ ಪಾಕ್ ಭೇಟಿಗೆ ಕಾತರರಾಗಿರೋದಾಗಿ ಟ್ರಂಪ್ ತಿಳಿಸಿದ್ದಾರಂತೆ. ನಾನು ಅಸಾಧಾರಣ ವ್ಯಕ್ತಿತ್ವದ ಜನರನ್ನು ಕಂಡಿದ್ದು ಪಾಕಿಸ್ತಾನದಲ್ಲಿ, ನಿಜಕ್ಕೂ ಅವರು ಅದ್ಭುತ ಅನ್ನೋದನ್ನು ಪಾಕಿಸ್ತಾನೀಯರಿಗೆ ತಿಳಿಸಿ ಅಂತಾ ಟ್ರಂಪ್, ನವಾಜ್ ಷರೀಫ್ ಬಳಿ ಮನವಿ ಮಾಡಿದ್ದಾರೆ.

 

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...