alex Certify
ಕನ್ನಡ ದುನಿಯಾ       Mobile App
       

Kannada Duniya

ಟ್ವಿಟ್ಟರ್ ನಲ್ಲಿ ಮಗಳು ಎಂದುಕೊಂಡು ಬೇಸ್ತುಬಿದ್ದ ಟ್ರಂಪ್

donald-ivanka-trump-new-photo

ಅಮೆರಿಕದ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿರೋ ಡೊನಾಲ್ಡ್ ಟ್ರಂಪ್ ಟ್ವಿಟ್ಟರ್ ನಲ್ಲಿ ಬೇಸ್ತು ಬಿದ್ದಿದ್ದಾರೆ.

ತಮ್ಮ ಪುತ್ರಿ ಇವಾಂಕಾ ಟ್ರಂಪ್ ಅಂತಾ ಭಾವಿಸಿ ಅದೇ ಹೆಸರಿನ ಇಂಗ್ಲೆಂಡ್ ನ ಇನ್ಯಾರೋ ಮಹಿಳೆಗೆ ರಿಟ್ವೀಟ್ ಮಾಡಿದ್ದಾರೆ. ಲಾರೆನ್ಸ್ ಗೂಡ್ ಸ್ಟೇನ್ ಎಂಬಾತ ‘ಇವಾಂಕಾ ನಿಜಕ್ಕೂ ಗ್ರೇಟ್, ನಿಜವಾದ ಕ್ಯಾರೆಕ್ಟರ್ ಮತ್ತು ಕ್ಲಾಸ್ ಇರುವ ಮಹಿಳೆ’ ಅಂತಾ ಟ್ವೀಟ್ ಮಾಡಿದ್ದ.

ಇವಾಂಕಾ ಟ್ರಂಪ್ ಬದಲು ಬ್ರೈಟನ್ ನ ಇವಾಂಕಾ ಎಂಬ ಮಹಿಳೆಗೆ ತಪ್ಪಾಗಿ ಅದನ್ನು ಟ್ಯಾಗ್ ಮಾಡಿದ್ದ. ಡೊನಾಲ್ಡ್ ಟ್ರಂಪ್ ಅದನ್ನು ಗಮನಿಸದೆ ರಿಟ್ವೀಟ್ ಮಾಡಿದ್ದಾರೆ. ಟ್ರಂಪ್ ಮಾಡಿದ್ದ ಟ್ವೀಟ್ ಅನ್ನು 4000 ಬಾರಿ ರಿಟ್ವೀಟ್ ಮಾಡಲಾಗಿದೆ. ಹಲವರು ಟ್ರಂಪ್ ಮಾಡಿರುವ ತಪ್ಪನ್ನು ಗಮನಿಸಿ ಅದಕ್ಕೆ ಪ್ರತಿಕ್ರಿಯಿಸಿದ್ದಾರೆ. ಆದ್ರೂ ಟ್ರಂಪ್ ಮಾಡಿರೋ ಟ್ವೀಟನ್ನು ಬದಲಾಯಿಸಿಲ್ಲ, ಡಿಲೀಟ್ ಕೂಡ ಮಾಡಿಲ್ಲ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...