alex Certify
ಕನ್ನಡ ದುನಿಯಾ       Mobile App
       

Kannada Duniya

10 ವರ್ಷಗಳಿಂದ ಮಾಲೀಕನ ಸಮಾಧಿ ಕಾಯುತ್ತಿದ್ದ ನಾಯಿ ಪ್ರಾಣ ಬಿಟ್ಟಿದ್ದೂ ಅಲ್ಲೇ

ನಾಯಿ ತುಂಬಾ ಕೃತಜ್ಞತೆಯುಳ್ಳ ಪ್ರಾಣಿ. ಅನ್ನ ಹಾಕಿದ ಮಾಲೀಕನ ಋಣ ತೀರಿಸಲು ಎಂಥ ತ್ಯಾಗ ಮಾಡಲು ಕೂಡ ಸಿದ್ಧವಾಗಿರುತ್ತದೆ. ಕ್ಯಾಪ್ಟನ್ ಅನ್ನೋ ಜರ್ಮನ್ ಶೆಫರ್ಡ್ ನಾಯಿಯೊಂದು ತನ್ನ ಮಾಲೀಕನನ್ನು ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸುತ್ತಿತ್ತು.

ಸುಮಾರು 10 ವರ್ಷಗಳಿಂದ ಮಾಲೀಕನ ಸಮಾಧಿಯನ್ನು ಕಾಯುತ್ತಿತ್ತು. ಆದ್ರೀಗ ಅದೇ ಸ್ಥಳದಲ್ಲಿ ಕ್ಯಾಪ್ಟನ್ ಕೂಡ ಕೊನೆಯುಸಿರೆಳೆದಿದೆ. ಅರ್ಜೆಂಟೈನಾದ ಕಾರ್ಡೋಬಾ ಎಂಬಲ್ಲಿ ನಡೆದ ಘಟನೆ ಇದು. 2005ರಲ್ಲಿ ಮಿಗುಯೆಲ್ ಗುಜ್ಮಾನ್ ಎಂಬಾತ ತನ್ನ ಮಗನಿಗೋಸ್ಕರ ಈ ನಾಯಿಯನ್ನು ತಂದಿದ್ದ.

2006ರಲ್ಲಿ ಮಿಗುಯೆಲ್ ಮೃತಪಟ್ಟಿದ್ದ. ಆತನ ಅಂತ್ಯಸಂಸ್ಕಾರ ಮುಗಿಸಿಕೊಂಡು ಕುಟುಂಬಸ್ಥರೆಲ್ಲ ಮನೆಗೆ ಮರಳಿದ್ರು. ಆದ್ರೆ ಕ್ಯಾಪ್ಟನ್ ಸುಳಿವೇ ಇರಲಿಲ್ಲ. ನಾಯಿ ಎಲ್ಲಿಗೋ ಓಡಿ ಹೋಗಿದೆ ಅಂತಾನೇ ಎಲ್ಲರೂ ಭಾವಿಸಿದ್ರು. ಆದ್ರೆ ಕ್ಯಾಪ್ಟನ್ ಮಾತ್ರ ತನ್ನ ಮಾಲೀಕನ ಸಮಾಧಿ ಬಳಿಯೇ ಮಲಗಿತ್ತು.

ಆಹಾರ ಹುಡುಕಿಕೊಂಡು ಅತ್ತಿತ್ತ ಅಲೆದಾಡಿದ್ರೂ ಸಂಜೆ 6 ಗಂಟೆಯಾಗ್ತಿದ್ದಂತೆ ಸಮಾಧಿ ಬಳಿಗೆ ತೆರಳುತ್ತಿತ್ತು ಆ ಶ್ವಾನ. ನಾಯಿಗೆ ವಯಸ್ಸಾಗುತ್ತಾ ಬಂದಿತ್ತು. ಜೊತೆಗೆ ಕಿಡ್ನಿ ಕೂಡ ಫೇಲ್ ಆಗಿದ್ದರಿಂದ ಸಾವನ್ನಪ್ಪಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...