alex Certify
ಕನ್ನಡ ದುನಿಯಾ       Mobile App
       

Kannada Duniya

ಆಟ ಆಡುತ್ತಿದ್ದವನ ಬಳಿ ಬಂದ ತುಂಟ ನಾಯಿ ಮರಿ ಮಾಡಿದ್ದೇನು ಗೊತ್ತಾ…?

ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋಗಳು ವೈರಲ್‌ ಆಗುವುದು ಈಗ ಹೊಸ ವಿಚಾರವೇನಲ್ಲ. ಅದರಲ್ಲೂ ಸಿಸಿ ಟಿವಿ ದೃಶ್ಯಾವಳಿಗಳು ಹೆಚ್ಚು ಜನರ ಆಕರ್ಷಣೆಗೆ ಒಳಗಾಗುತ್ತವೆ.

ಚೀನಾದಲ್ಲಿ ವ್ಯಕ್ತಿಯೋರ್ವನ ವಾಲೆಟ್‌ ನ್ನು ನಾಯಿ ಮರಿಯೊಂದು ಎಗರಿಸಿದ್ದು, ಈ ವಿಡಿಯೋ ಈಗ ಅನೇಕ ಮಂದಿಯ ಗಮನ ಸೆಳೆದಿದೆ. ಚೀನಾದ ಪೀಪಲ್ಸ್ ಡೈಲಿ ಟ್ವಿಟರ್‌ ಪೇಜ್‌ನಲ್ಲಿ ಈ ವಿಡಿಯೋವನ್ನು ಶೇರ್ ಮಾಡಲಾಗಿದ್ದು, ಕಾರ್ಡ್ಸ್‌ ಆಡುತ್ತಿದ್ದ ಗುಂಪಿನ ವ್ಯಕ್ತಿಯೋರ್ವನ ಜೇಬಿನಿಂದ ವಾಲೆಟ್‌ ಕೆಳಕ್ಕೆ ಬಿದ್ದಿದೆ. ಇದನ್ನು ಗಮನಿಸದೇ ಆತ ಆಟದಲ್ಲಿ ಮಗ್ನನಾಗಿದ್ದಾನೆ.

ಇದೇ ವೇಳೆ ವ್ಯಕ್ತಿಯ ಬಳಿ ಬಂದ 2 ನಾಯಿಗಳು ವಾಲೆಟ್‌ನನ್ನು ಪರಿಶೀಲಿಸುತ್ತವೆ. ಇದರಲ್ಲಿ ಸಣ್ಣ ನಾಯಿ, ವಾಲೆಟ್‌ ಕಚ್ಚಿಕೊಂಡು ಸ್ಥಳದಿಂದ ಪರಾರಿಯಾಗಿದೆ. ಅಲ್ಲಿಂದ ಹೊರ ಹೋಗುವ ವೇಳೆ ಒಂದು ಬಾರಿ ವಾಲೆಟ್‌ ನ್ನು ಬೀಳಿಸಿದರೂ, ಆಟ ಆಡುವವರಿಗೆ ಈ ವಿಷಯ ಅರಿವಿಗೆ ಬಂದೇ ಇಲ್ಲ ! ಈ ಕಳ್ಳ ನಾಯಿ ಮರಿಯ ತುಂಟಾಟವನ್ನು ಅನೇಕರ ಮೆಚ್ಚಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...