alex Certify
ಕನ್ನಡ ದುನಿಯಾ       Mobile App
       

Kannada Duniya

10 ವರ್ಷಗಳ ಬಳಿಕ ಮರಳಿ ಬಂತು ನಾಪತ್ತೆಯಾಗಿದ್ದ ನಾಯಿ

ಪೆನ್ಸಿಲ್ವೇನಿಯಾದ ಅಪೋಲೋ ಎಂಬಲ್ಲಿ 10 ವರ್ಷಗಳ ಹಿಂದೆ ಕಾಣೆಯಾಗಿದ್ದ ನಾಯಿಯೊಂದು ಮತ್ತೆ ಮರಳಿ ಮನೆಗೆ ಬಂದಿದೆ. ಡೆಬ್ರಾ ಸೂಯೆರ್ವೆಲ್ಡ್ ಎಂಬಾತ ಈ ನಾಯಿಯನ್ನು ಮುದ್ದಾಗಿ ಸಾಕಿದ್ದ. ಅದಕ್ಕೆ ಅಬ್ಬಿ ಅಂತಾ ಹೆಸರಿಟ್ಟಿದ್ದ.

ಕಪ್ಪು ಲಾಬ್ರೆಡಾರ್ ನಾಯಿ ಒಮ್ಮೆ ಮನೆಯಿಂದ ಓಡಿ ಹೋಗಿತ್ತು. ಸಾಕಷ್ಟು ಹುಡುಕಾಡಿದ್ರೂ ಶ್ವಾನದ ಸುಳಿವೇ ಇರಲಿಲ್ಲ. ನಾಯಿ ಕಾಣೆಯಾಗಿ 10 ವರ್ಷಗಳೇ ಕಳೆದಿದ್ದರಿಂದ ಅದು ಸತ್ತು ಹೋಗಿರಬಹುದು ಅಂತಾನೇ ಡೆಬ್ರಿ ಕುಟುಂಬದವರು ಭಾವಿಸಿದ್ದರು.

ಆದ್ರೆ ಈಗ ಮತ್ತೆ ನಾಯಿ ಮನೆಗೆ ಮರಳಿ ಬಂದಿರೋದು ಅವರಿಗೆ ಖುಷಿ ಕೊಟ್ಟಿದೆ. ಮುದ್ದಿನ ಶ್ವಾನ ಅಬ್ಬಿ ಸಾವನ್ನೇ ಗೆದ್ದು ಬಂದಿದೆ ಅಂತಾ ಡೆಬ್ರಿ ಸಂತಸ ವ್ಯಕ್ತಪಡಿಸಿದ್ದಾರೆ. ಇಷ್ಟು ದಿನ ನಾಯಿ ಎಲ್ಲಿತ್ತು ಅನ್ನೋದು ಮಾತ್ರ ನಿಗೂಢವಾಗಿದೆ. ಆದ್ರೆ ನಾಯಿ ಆರೋಗ್ಯವಾಗಿದ್ದು, ಅದಕ್ಕೆ ಯಾವುದೇ ಸಮಸ್ಯೆಯಾಗಿಲ್ಲ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...