alex Certify
ಕನ್ನಡ ದುನಿಯಾ       Mobile App
       

Kannada Duniya

ಮನ ಕಲಕುತ್ತೆ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಈ ದೃಶ್ಯ

ನಿಜಕ್ಕೂ ಈ ದೃಶ್ಯ ಮನ ಕಲಕುವಂತಹದ್ದು. ಫಿಲಿಫೈನ್ಸ್ ​​​​​ನ ರಸ್ತೆಯಲ್ಲಿ ವ್ಯಕ್ತಿಯೊಬ್ಬ ವೀಲ್​ ಚೇರ್​ ನಲ್ಲಿ ಹೊರಟ್ರೆ, ಆತ ಸಾಕಿದ ನಾಯಿ, ವೀಲ್ ​ಚೇರ್​ ನೂಕುತ್ತದೆ. ನಾಯಿ ತನ್ನ ತಲೆ ಹಾಗೂ ಮುಖದ ಸಹಾಯದಿಂದ ವೀಲ್ ​ಚೇರ್ ತಳ್ಳುತ್ತಿರುವ ದೃಶ್ಯ ಸಾಮಾಜಿಕ ತಾಣದಲ್ಲಿ ವೈರಲ್​ ಆಗ್ತಾ ಇದೆ. ಪದಗಳಲ್ಲಿ ವರ್ಣಿಸಲಾಗದ ನಾಯಿ-ಮನುಷ್ಯನ ಪ್ರೀತಿಗೆ ವಿಶ್ವವೇ ಸಲಾಂ ಎಂದಿದೆ.

ಕಾರಿನಲ್ಲಿ ಕಾಲೇಜಿಗೆ ಹೊರಟ್ಟಿದ ಎಂಬಿಎ ವಿದ್ಯಾರ್ಥಿಯೊಬ್ಬ ಈ ದೃಶ್ಯವನ್ನು ಸೆರೆ ಹಿಡಿದಿದ್ದು, ಫೇಸ್​ ಬುಕ್ ​​ನಲ್ಲಿ ಅಪ್​ ಲೋಡ್​ ಮಾಡಿದ್ದಾನೆ.

ಡ್ಯಾನಿಲೋ ಅಲಾರ್ಕಾನ್, ಬೈಕ್ ​​ನಲ್ಲಿ ಹೋಗುವಾಗ ಬಿದ್ದು ಬೆನ್ನುಮೂಳೆಯ ತೊಂದರೆಯಿಂದ ಬಳಲುತ್ತಿದ್ದರು. ಅಪಘಾತದ​ ಬಳಿಕ ಡ್ಯಾನಿಲೋ ಎದ್ದು ನಡೆಯದ ಸ್ಥಿತಿ ಎದುರಾಯಿತು. ಆಗಿನಿಂದ ಡ್ಯಾನಿಲೋ ಸಾಕಿದ ನಾಯಿ ಇವರಿಗೆ ಸಹಾಯ ಮಾಡುತ್ತಿದೆ. ಡ್ಯಾನಿಲೋ ಆಫೀಸ್​, ಮನೆ, ಅಂಗಡಿ, ಶಾಪಿಂಗ್​ ಎಲ್ಲೇ ಹೋದ್ರು ನಾಯಿ ಜೊತೆಗಿದ್ದೇ ಇರುತ್ತದೆ. ಮಾಲೀಕನ ಕಷ್ಟ ಕಾಲದಲ್ಲೂ ನೆರವಿಗೆ ನಿಂತ ನಾಯಿಗೆ ಹ್ಯಾಟ್ಸ್​ ಅಪ್​.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...