alex Certify
ಕನ್ನಡ ದುನಿಯಾ       Mobile App
       

Kannada Duniya

ಮಾಲೀಕನ ಪ್ರಾಣಕ್ಕೆ ಕುತ್ತು ತಂತು ನಾಯಿ

2017_3image_14_14_070050000dog1-ll

ನಂಬಿಕೆಗೆ ಇನ್ನೊಂದು ಹೆಸರು ನಾಯಿ. ಆದ್ರೆ ಪ್ರಾಣಿಗೆ ಯಾವಾಗ ಕೋಪ ಬರುತ್ತೆ ಅನ್ನೋದನ್ನು ಯಾರೂ ಊಹಿಸಲು ಸಾಧ್ಯವಿಲ್ಲ. ಲಂಡನ್ ನಲ್ಲಿ ಸಾಕು ನಾಯಿಯೊಂದು ತನ್ನ ಯಜಮಾನನ ಸಾವಿಗೆ ಕಾರಣವಾಗಿದೆ.

ಐಟಿ ತಜ್ಞ Mario Perivoitos ಹೆಸರಿನ ವ್ಯಕ್ತಿ ಜೊತೆ ಅವನ ಮನೆಯಲ್ಲಿಯೇ ಬಿಬಿಸಿ ಸಾಕ್ಷ್ಯಚಿತ್ರ ತಯಾರಿಕಾ ಸಿಬ್ಬಂದಿ ಸಂದರ್ಶನ ನಡೆಸುತ್ತಿದ್ದರು. ಸ್ಟಾಫರ್ಡ್ಶೈರ್ ಬುಲ್ ಟೆರಿಯರ್ ತಳಿಯ ನಾಯಿ Mario Perivoitos ಕುತ್ತಿಗೆ ಮೇಲೆ ಅಚಾನಕ್ ದಾಳಿ ನಡೆಸಿದೆ. ಇದ್ರಿಂದ ಗಾಯಗೊಂಡ Mario Perivoitos ಗೆ ರಕ್ತಸ್ರಾವವಾಗಿದೆ.

ತಕ್ಷಣ ಬಿಬಿಸಿ ಸಿಬ್ಬಂದಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದ್ರೆ ಚಿಕಿತ್ಸೆ ಫಲಕಾರಿಯಾಗಲಿಲ್ಲ. Mario Perivoitos ಸಾವನ್ನಪ್ಪಿದ್ದಾನೆ. Mario Perivoitos ಕೂಗಿದ್ದು ಕೇಳಿ ಓಡಿ ಬಂದೆವು. ನಾಯಿಯಿಂದ ತಪ್ಪಿಸಿಕೊಳ್ಳಲು Mario Perivoitos ಪರದಾಡ್ತಾ ಇದ್ದರು ಎಂದು ಅಕ್ಕಪಕ್ಕದವರು ಹೇಳಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...