alex Certify
ಕನ್ನಡ ದುನಿಯಾ       Mobile App
       

Kannada Duniya

ಶ್ವಾನಕ್ಕೆ ಮುತ್ತಿಕ್ಕುವ ಮುನ್ನ ಈ ಸುದ್ದಿ ಓದಿ

dog_licks

ನಾಯಿಯೆಂದ್ರೆ ಕೆಲವರಿಗೆ ತುಂಬಾ ಪ್ರೀತಿ. ಸಾಕಿದ ನಾಯಿಗಳನ್ನು ಮಕ್ಕಳಂತೆ ನೋಡಿಕೊಳ್ತಾರೆ ಶ್ವಾನ ಪ್ರಿಯರು. ಆದ್ರೆ ಸಾಕು ನಾಯಿ ಕೂಡ ನಿಮಗೆ ಆಪತ್ತು ತರಬಹುದು ಎಚ್ಚರ. 70 ವರ್ಷದ ಮಹಿಳೆಯೊಬ್ಬಳು ಸಾಕು ನಾಯಿಗೆ ಚುಂಬಿಸಿ ಆಸ್ಪತ್ರೆಯಲ್ಲಿ ಸಾವು- ಬದುಕಿನ ನಡುವೆ ಹೋರಾಡಿದ್ದಾಳೆ.

ನಿಯತಕಾಲಿಕೆಯೊಂದರ ವರದಿ ಪ್ರಕಾರ ಮಹಿಳೆಯೊಬ್ಬಳು ನಾಯಿ ಸಾಕಿದ್ದಳಂತೆ. ಅದನ್ನು ಪ್ರೀತಿ ಮಾಡ್ತಾ ಕಿಸ್ ಕೊಟ್ಟಿದ್ದಾಳೆ. ನಾಯಿಯ ಬ್ಯಾಕ್ಟೀರಿಯಾ ಮಹಿಳೆ ದೇಹವನ್ನು ಸೇರಿ ನಿಧಾನವಾಗಿ ಆರೋಗ್ಯ ಕೆಡಿಸಿದೆ. ಮಹಿಳೆ ಸಂಬಂಧಿಕರೊಬ್ಬರ ಜೊತೆ ಫೋನಿನಲ್ಲಿ ಮಾತನಾಡುತ್ತಿರುವಾಗ ಧ್ವನಿ ಕ್ಷೀಣಿಸಿದೆ. ನಂತ್ರ ಧ್ವನಿ ಸಂಪೂರ್ಣವಾಗಿ ನಿಂತು ಹೋಗಿದೆ. ತಕ್ಷಣ ಸಂಬಂಧಿಕರು ಆಂಬ್ಯುಲೆನ್ಸ್ ಗೆ ಕರೆ ಮಾಡಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಅವರು ಬರುವ ವೇಳೆ ಮಹಿಳೆ ಪ್ರಜ್ಞೆ ತಪ್ಪಿದ್ದಳಂತೆ. ನಾಲ್ಕು ದಿನಗಳ ಹಿಂದೆಯೇ ಆಕೆಗೆ ತಲೆನೋವು, ಶೀತಜ್ವರ, ಬೇಧಿ ಕಾಣಿಸಿಕೊಂಡಿತ್ತಂತೆ.

ನಂತ್ರ ಮೂತ್ರಪಿಂಡ ಕೂಡ ವಿಫಲವಾಗಿದೆ. ರಕ್ತ ಪರೀಕ್ಷೆ ನಂತ್ರ Capnocytophaga canimorsus ಬ್ಯಾಕ್ಟೀರಿಯಾ ಸೋಂಕಿನಿಂದ ಬಳಲುತ್ತಿದ್ದಾಳೆಂಬುದು ಗೊತ್ತಾಗಿದೆ. ಈ ಬ್ಯಾಕ್ಟೀರಿಯಾ ನಾಯಿ ಹಾಗೂ ಬೆಕ್ಕಿನ ಬಾಯಿಯಿಂದ ಬರುವಂತಹದ್ದು. ಸತತ ಎರಡು ವಾರಗಳ ಕಾಲ ಚಿಕಿತ್ಸೆ ನಡೆದಿದೆ. ಒಂದು ತಿಂಗಳ ನಂತ್ರ ಮಹಿಳೆಯನ್ನು ಮನೆಗೆ ಕಳುಹಿಸಲಾಗಿದೆ.

ನಾಯಿ ಕಚ್ಚುವುದರಿಂದ ಮಾತ್ರ ಈ ಸೋಂಕು ತಗಲುವುದಿಲ್ಲ. ನಾಯಿಗೆ ಮುತ್ತಿಟ್ಟರೆ ಅಥವಾ ನಾಯಿ ನಾಲಿಗೆಯಿಂದ ಮನುಷ್ಯನನ್ನು ಮುದ್ದಿಸಿದರೆ ಕೂಡ ಈ ಸೋಂಕು ತಗುಲಲಿದೆ. ಹಾಗಾಗಿ ನಾಯಿ ಸಾಕಿದವರು ಎಚ್ಚರದಿಂದಿರಿ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...