alex Certify
ಕನ್ನಡ ದುನಿಯಾ       Mobile App
       

Kannada Duniya

ನಾಯಿಯನ್ನು ರಕ್ಷಿಸಲು ನೀರಿಗೆ ಹಾರಿದ ಯುವಕ…ಮುಂದೇನಾಯ್ತು?

dog-rescue-650_650x400_41497331943

ಲಂಡನ್ ನಲ್ಲಿ ನೀರಿಗೆ ಬಿದ್ದ ನಾಯಿಯನ್ನು ರಕ್ಷಣೆ ಮಾಡಲು ನದಿಗೆ ಹಾರಿದ ಯುವಕನೊಬ್ಬನನ್ನು ಸುರಕ್ಷಿತವಾಗಿ ಮೇಲಕ್ಕೆ ಕರೆತರಲಾಗಿದೆ. ಈ ದೃಶ್ಯಗಳು ಕ್ಯಾಮರಾದಲ್ಲಿ ಸೆರೆಯಾಗಿವೆ. ಈ ಸಾಹಸಿ ಯುವಕ ತನ್ನ ತಂದೆ ತಾಯಿಯ ಜೊತೆ ಥೇಮ್ಸ್ ನದಿಯನ್ನು ವೀಕ್ಷಿಸಲು ಬಂದಿದ್ದ.

ಜೊತೆಗೆ ನಾಯಿಯನ್ನೂ ಕರೆತಂದಿದ್ದ. ಇದ್ದಕ್ಕಿದ್ದಂತೆ ನಾಯಿ ನೀರಿಗೆ ಜಿಗಿದಿದೆ. ಅದನ್ನು ನೋಡಿ ಗಾಬರಿಯಾದ ಯುವಕ ಶ್ವಾನವನ್ನು ರಕ್ಷಿಸಲು ತಾನೂ ನೀರಿಗೆ ಹಾರಿದ್ದಾನೆ. ಈಜಿಕೊಂಡು ಹೋಗಿ ನಾಯಿಯನ್ನು ರಕ್ಷಣೆ ಮಾಡಿ ಕರೆತಂದಿದ್ದಾನೆ. ಆದ್ರೆ ಇಬ್ಬರೂ ಮೇಲಕ್ಕೆ ಬರಲು ಸಾಧ್ಯವಾಗಿಲ್ಲ.

ಅಲ್ಲೇ ನದಿಯ ತಡೆಗೋಡೆಗೆ ಹಾಕಿದ್ದ ಸರಪಳಿಯ ಮೇಲೆ ನಾಯಿಯ ಜೊತೆ ಯುವಕ ನಿಂತಿದ್ದ. ಕೂಡಲೇ ಬೋಟ್ ತೆಗೆದುಕೊಂಡು ಬಂದ ರಕ್ಷಣಾ ಸಿಬ್ಬಂದಿ ಮೊದಲು ನಾಯಿಯನ್ನು ಮೇಲಕ್ಕೆಳೆದುಕೊಂಡ್ರು. ನಂತರ ಯುವಕನ್ನು ಕೂಡ ಬೋಟ್ ನಲ್ಲಿ ಕೂರಿಸಿಕೊಂಡು ಸುರಕ್ಷಿತವಾಗಿ ಕರೆತಂದು ಬಿಟ್ಟಿದ್ದಾರೆ. ಈ ವಿಡಿಯೋ ಸಾಮಾಜಿಕ ತಾಣಗಳಲ್ಲಿ ಅಪ್ ಲೋಡ್ ಆಗಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...