alex Certify
ಕನ್ನಡ ದುನಿಯಾ       Mobile App
       

Kannada Duniya

ವಾರಗಟ್ಟಲೆ ಮಾಲೀಕಳ ಶವಕ್ಕೆ ಕಾವಲಿತ್ತು ಮುದ್ದಿನ ನಾಯಿ

ಹಂಗ್ರಿ ದೇಶದಲ್ಲಿ ನಾಯಿಯೊಂದು ತನ್ನ ಮಾಲೀಕಳ ಶವವನ್ನು ಒಂದು ವಾರದಿಂದ ಕಾಯುತ್ತಿತ್ತು. ಅಲ್ಲಿಂದ ಒಂದಿಂಚೂ ಅಲುಗಾಡಿರಲಿಲ್ಲ, ಒಂದು ವಾರದಿಂದ ನೀರು ಆಹಾರ ಇಲ್ಲದೇ ಪ್ರಜ್ಞಾಹೀನ ಸ್ಥಿತಿಗೆ ತಲುಪಿತ್ತು.

ಇನ್ನು 2 ದಿನ ಕಳೆದಿದ್ರೆ ನಾಯಿ ಕೂಡ ಬದುಕುತ್ತಿರಲಿಲ್ಲ ಅಂತಾ ವೈದ್ಯರು ತಿಳಿಸಿದ್ದಾರೆ. ಪೊಲೀಸರು ನಾಯಿಯನ್ನು ರಕ್ಷಣೆ ಮಾಡಿ, ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಆ ಫ್ಲಾಟ್ ನಲ್ಲಿ ವೃದ್ಧೆಯೊಬ್ಬಳು ನಾಯಿಯ ಜೊತೆಗೆ ವಾಸಿಸ್ತಾ ಇದ್ಲು.

ಕೆಲ ದಿನಗಳಿಂದ ಒಮ್ಮೆಯೂ ಆಕೆ ಮನೆಯಿಂದ ಹೊರಕ್ಕೆ ಬಂದಿರಲಿಲ್ಲ. ಅನುಮಾನ ಬಂದ ನೆರೆಹೊರೆಯವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಬಾಗಿಲು ಒಡೆದು ಒಳ ಪ್ರವೇಶಿಸಿದಾಗ ಕಂಡಿತ್ತು ಮಹಿಳೆಯ ಕೊಳೆತ ಶವ.

ಪಕ್ಕದಲ್ಲೇ ನಾಯಿ ಕೂಡ ಅಸ್ವಸ್ಥಗೊಂಡು ಮಲಗಿತ್ತು. ಎದ್ದು ನಿಲ್ಲಲೂ ಕೂಡ ನಾಯಿಗೆ ಶಕ್ತಿ ಇರಲಿಲ್ಲ. ಇನ್ನು ಆ 66 ವರ್ಷದ ಮಹಿಳೆ ಸಹಜವಾಗಿ ಸಾವನ್ನಪ್ಪಿದ್ದಾಳೆ ಅಂತಾ ಹೇಳಲಾಗ್ತಿದೆ. ಆದ್ರೆ ನಾಯಿಯ ನಿಷ್ಠೆ ಮಾತ್ರ ಭಾರೀ ಮೆಚ್ಚುಗೆಗೆ ಪಾತ್ರವಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...