alex Certify
ಕನ್ನಡ ದುನಿಯಾ       Mobile App
       

Kannada Duniya

ಅಂಗಡಿಗೆ ನುಗ್ಗಿದ ತ್ರಿಚಕ್ರ ವಾಹನದ ಸ್ಟೇರಿಂಗ್ ಹಿಂದೆ ಇದ್ದವರ್ಯಾರು ಗೊತ್ತಾ?

ಚೀನಾದ ಜಿಯಾಂಗ್ಸು ಪ್ರಾಂತ್ಯದ ಟಿಯಾಕ್ಸಿನ್ ನಗರದಲ್ಲಿ ವಿಲಕ್ಷಣ ಪ್ರಕರಣವೊಂದು ನಡೆದಿದೆ. ತ್ರಿಚಕ್ರ ವಾಹನವೊಂದು ಮೊಬೈಲ್ ಶಾಪ್ ಒಳನುಗ್ಗಿದ್ದು, ಸ್ಟೇರಿಂಗ್ ಹಿಂದೆ ಇದ್ದವರನ್ನು ಕಂಡು ಅಂಗಡಿಯವರು ದಂಗಾಗಿದ್ದಾರೆ.

ಮೊಬೈಲ್ ಅಂಗಡಿಯಲ್ಲಿ ನೌಕರರು ತಮ್ಮ ತಮ್ಮ ಕೆಲಸಗಳಲ್ಲಿ ಬ್ಯುಸಿಯಾಗಿದ್ದ ವೇಳೆ ಏಕಾಏಕಿ ತ್ರಿಚಕ್ರ ವಾಹನ ಅಂಗಡಿಗೆ ನುಗ್ಗಿದೆ. ಇದರಿಂದ ಬೆಚ್ಚಿಬಿದ್ದ ಅವರು ಸ್ಟೇರಿಂಗ್ ಹಿಂದೆ ನಾಯಿಯೊಂದು ಇದ್ದದ್ದನ್ನು ಕಂಡು ಅಚ್ಚರಿಗೊಂಡಿದ್ದಾರೆ.

ಈ ತ್ರಿಚಕ್ರ ವಾಹನ, ಮೊಬೈಲ್ ಅಂಗಡಿಯ ಪಕ್ಕದಲ್ಲೇ ಇದ್ದ ಮತ್ತೊಂದು ಅಂಗಡಿ ಮಾಲೀಕನದ್ದೆಂದು ಹೇಳಲಾಗಿದ್ದು, ಆತ ನಿರ್ಲಕ್ಷ ವಹಿಸಿ ತನ್ನ ವಾಹನದ ಕೀಯನ್ನು ಅದರಲ್ಲೇ ಬಿಟ್ಟಿದ್ದಾನೆ.

ಆಗ ನಾಯಿಯೊಂದು ತ್ರಿಚಕ್ರ ವಾಹನದ ಮೇಲೇರಿ ಕೀ ತಿರುಗಿಸಿದೆ. ಇದರ ಪರಿಣಾಮ ವಾಹನ ಚಾಲನೆಗೊಂಡಿದ್ದು, ನೇರವಾಗಿ ಮೊಬೈಲ್ ಶಾಪ್ ಗೆ ನುಗ್ಗಿದೆ. ಅದೃಷ್ಟವಶಾತ್ ಯಾರಿಗೂ ಅಪಾಯವಾಗಿಲ್ಲವಾದರೂ ಮೊಬೈಲ್ ಶಾಪ್ ನ ಗ್ಲಾಸ್ ಹಾಗೂ ಕೌಂಟರ್ ಗೆ ಹಾನಿಯಾಗಿದೆ, ಇದರ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ವೈರಲ್ ಆಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...