alex Certify
ಕನ್ನಡ ದುನಿಯಾ       Mobile App
       

Kannada Duniya

ಇಂಥ ಕಳ್ಳರೂ ಇರ್ತಾರಾ…?

Black_lab_hi-resಕೈಗೆ ಸಿಕ್ಕಿದ್ದನ್ನು ದೋಚುವ ಮನೋಭಾವ ಕಳ್ಳರಿಗೆ ಸಹಜವಾಗಿಯೇ ಇರುತ್ತದೆ. ಆದರೆ, ಕೆಲವೊಮ್ಮೆ ಕಳ್ಳರೂ ಕೂಡ ನಿಯತ್ತಿನ ಬುದ್ಧಿ ತೋರಿಸುತ್ತಾರೆ ಎಂಬುದಕ್ಕೆ ಇಲ್ಲಿದೆ ನೋಡಿ ಉದಾಹರಣೆ. ಕಳ್ಳರು ಕದ್ದ ಮಾಲನ್ನು ಪ್ರಾಮಾಣಿಕವಾಗಿ ವಾರಸುದಾರರಿಗೆ ಒಪ್ಪಿಸಿದ್ದಾರೆ.

ಚೀನಾದ ಬೀಜಿಂಗ್ ನಲ್ಲಿ ನಡೆದ ಕುತೂಹಲಕಾರಿ ಪ್ರಕರಣವೊಂದರ ಸ್ಟೋರಿ ಇದಾಗಿದೆ. ವೃದ್ಧರು, ಕಣ್ಣು ಕಾಣದವರು ತಮಗೆ ದಾರಿ ತೋರಿಸಲು ನಾಯಿಯನ್ನು ಸಾಕಿಕೊಂಡಿರುತ್ತಾರೆ. ಹೀಗೆ ವೃದ್ಧೆಯೊಬ್ಬರು ದಾರಿ ತೋರಿಸುವ ನಾಯಿಯೊಂದನ್ನು ಕರೆದುಕೊಂಡು ವಾಕಿಂಗ್ ಹೋಗಿದ್ದ ಸಂದರ್ಭದಲ್ಲಿ ಗ್ರೇ ಕಲರ್ ವ್ಯಾನ್ ನಲ್ಲಿ ಬಂದಿದ್ದ ಕಳ್ಳರ ತಂಡ ನಾಯಿಯನ್ನು ಅಪಹರಿಸಿತ್ತು. 7 ವರ್ಷದ ಬ್ಲಾಕ್ ಲ್ಯಾಬ್ರಡಾರ್ ನಾಯಿ ಇದಾಗಿದ್ದು, ನಾಯಿ ಕಳೆದುಕೊಂಡ ವೃದ್ಧೆ ಸುಮ್ಮನಾಗಿದ್ದರು.

ಚೀನಾದಲ್ಲಿ ನಾಯಿ ಮಾಂಸಕ್ಕೆ ಭಾರೀ ಬೇಡಿಕೆ ಇರುವುದರಿಂದ ಈ ನಾಯಿಯನ್ನು ಕೂಡ ಅಪಹರಿಸಿ ತಿನ್ನುವವರಿಗೆ ಮಾರಿರಬಹುದೆಂದು ವೃದ್ಧೆ ಸುಮ್ಮನಾಗಿದ್ದರು. ಆದರೆ, ವೃದ್ಧೆಗೆ ದಾರಿ ತೋರಿಸುವ ನಾಯಿಯನ್ನು ಅಪಹರಿಸಿದ ಕಳ್ಳರಿಗೆ ಅದನ್ನು ತಿನ್ನುವವರಿಗೆ ಮಾರಲು ಮನಸ್ಸಾಗಿಲ್ಲ. ‘ದಯವಿಟ್ಟು ಕ್ಷಮಿಸಿ’ ಎಂದು ಚೀಟಿ ಬರೆದು ನಾಯಿಗೆ ಅಂಟಿಸಿ ವೃದ್ಧೆಯ ಮನೆಯ ಬಳಿ ನಾಯಿ ಬಿಟ್ಟು ಹೋಗಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...