alex Certify
ಕನ್ನಡ ದುನಿಯಾ       Mobile App
       

Kannada Duniya

ಮಾಲೀಕನ ಪ್ರಾಣಕ್ಕೇ ಕುತ್ತು ತಂದಿದೆ ಮುದ್ದಿನ ನಾಯಿ!

derek-mead-facebook-650_650x400_81496766408-1

ಲಂಡನ್ ನಲ್ಲಿ ಪ್ರೀತಿಯಿಂದ ಸಾಕಿದ ನಾಯಿಯೇ ಮಾಲೀಕನ ಪ್ರಾಣಕ್ಕೆ ಕಂಟಕವಾಗಿದೆ. ನಾರ್ತ್ ಸೊಮರ್ಸೆಟ್ ನಲ್ಲಿ ನಾಯಿ ಆಕಸ್ಮಿಕವಾಗಿ ಟ್ರ್ಯಾಕ್ಟರ್ ಚಲಾಯಿಸಿದ್ದರಿಂದ ಅದರ ಅಡಿಯಲ್ಲಿ ಸಿಕ್ಕು ರೈತ ಮೃತಪಟ್ಟಿದ್ದಾನೆ. ಮೃತ ಡೆರೆಕ್ ಮೀಡ್ ಒಬ್ಬ ಲಕ್ಷಾಧೀಶ್ವರ.

ಹೈನುಗಾರಿಕೆಯಲ್ಲಿ ತೊಡಗಿಕೊಂಡಿದ್ದ. ಜೊತೆಗೆ ಪ್ರಾಪರ್ಟಿ ಡೀಲಿಂಗ್ ಮಾಡುತ್ತಿದ್ದ. ಟ್ರಾಕ್ಟರ್ ದುರಂತದಿಂದ ಡೆರೆಕ್ ಗೆ ಹೃದಯಾಘಾತವಾಗಿದ್ದು, ಇಹಲೋಕ ತ್ಯಜಿಸಿದ್ದಾನೆ. ಡೆರೆಕ್ ಹೊಲದಲ್ಲಿ ಕೆಲಸ ಮಾಡ್ತಾ ಇದ್ದ, ಅಲ್ಲೇ ಆಟವಾಡ್ತಾ ಇದ್ದ ನಾಯಿ ಜೆಸಿಬಿ ಫಾರ್ಮ್ ಲೋಡರ್ ಹತ್ತಿ ಕುಳಿತಿದೆ.

ಆಗ ಆಕಸ್ಮಿಕವಾಗಿ ಗೇರ್ ಚಲಾಯಿಸಿದೆ, ನಿಲ್ಲಿಸಿದ್ದ ಟ್ರ್ಯಾಕ್ಟರ್ ದಿಢೀರನೆ ವೇಗವಾಗಿ ಚಲಿಸಲಾರಂಭಿಸಿತ್ತು. ಸಮೀಪದಲ್ಲೇ ಇದ್ದ ಡೆರೆಕ್ ಗೆ ತಪ್ಪಿಸಿಕೊಳ್ಳಲು ಸಾಧ್ಯವಾಗಿಲ್ಲ. ಟ್ಯ್ರಾಕ್ಟರ್ ಅಡಿಯಲ್ಲಿ ಸಿಕ್ಕು ಆತ ತೀವ್ರವಾಗಿ ಗಾಯಗೊಂಡಿದ್ದ, ಅದೇ ಶಾಕ್ ನಲ್ಲಿ ಅವನಿಗೆ ಕಾರ್ಡಿಯಾಕ್ ಅರೆಸ್ಟ್ ಸಂಭವಿಸಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...