alex Certify
ಕನ್ನಡ ದುನಿಯಾ       Mobile App
       

Kannada Duniya

ಆಪರೇಶನ್ ವೇಳೆ ಅದಲು ಬದಲಾದ ರೋಗಿ

ನೈರೋಬಿಯ ಕೆನ್ಯಟ್ಟಾ ನ್ಯಾಶನಲ್ ಆಸ್ಪತ್ರೆಯಲ್ಲಿ ನಡೆದ ವಿಚಿತ್ರ ಘಟನೆ ಇದು. ರೋಗಿಯನ್ನು ಬಿಟ್ಟು ಬೇರೊಬ್ಬನಿಗೆ ವೈದ್ಯರ ತಂಡ ಮೆದುಳಿನ ಶಸ್ತ್ರಚಿಕಿತ್ಸೆ ಮಾಡಿದೆ. ಒಬ್ಬ ರೋಗಿಗೆ ಮೆದುಳಿನಲ್ಲಿ ರಕ್ತ ಹೆಪ್ಪುಗಟ್ಟಿತ್ತು, ಇನ್ನೋರ್ವನಿಗೆ ಮೆದುಳಿನಲ್ಲಿ ಊತ ಕಾಣಿಸಿಕೊಂಡಿತ್ತು.

ರಕ್ತ ಹೆಪ್ಪುಗಟ್ಟಿದ್ದ ರೋಗಿ ಎಂದುಕೊಂಡು ಮೆದುಳಿನ ಊತವಿದ್ದವನಿಗೆ ತಜ್ಞ ವೈದ್ಯರ ತಂಡ ಶಸ್ತ್ರಚಿಕಿತ್ಸೆ ನಡೆಸಿದೆ. ತಲೆಬುರುಡೆಯನ್ನು ಓಪನ್ ಮಾಡಿ ಬ್ಲಡ್ ಕ್ಲಾಟ್ ಹುಡುಕಿದ್ದಾರೆ, ಆದ್ರೆ ಮೆದುಳಿನಲ್ಲಿ ರಕ್ತ ಹೆಪ್ಪುಗಟ್ಟಿರಲೇ ಇಲ್ಲ, ಅದನ್ನು ನೋಡಿದಾಗ ವೈದ್ಯರಿಗೆ ತಾವು ಮಾಡಿರೋ ಯಡವಟ್ಟಿನ ಅರಿವಾಗಿದೆ.

ಆಪರೇಶನ್ ಥಿಯೇಟರ್ ಗೆ ಕೊಂಡೊಯ್ಯುವಾಗ ರೋಗಿಗೆ ಅವನ ಹೆಸರಿರುವ ಗೌನ್ ತೊಡಿಸಬೇಕು ಅನ್ನೋದು ನಿಯಮ. ಜೊತೆಗೆ ವೈದ್ಯರು ರೋಗಿ ಜೊತೆ ಮಾತನಾಡಿ ಸಮಸ್ಯೆ ಏನು ಅನ್ನೋದನ್ನು ತಿಳಿದುಕೊಳ್ಳಬೇಕು. ಆತನ ಫೈಲ್ ನೋಡಿ ಆಪರೇಷನ್ ಆರಂಭಿಸೋದಲ್ಲ ಅನ್ನೋದು ಆಸ್ಪತ್ರೆಯ ಮುಖ್ಯಸ್ಥರ ವಾದ.

ಆದ್ರೆ ವೈದ್ಯರು ಮಾತ್ರ ಇದ್ಯಾವುದನ್ನೂ ಗಮನಿಸದೇ ಆಪರೇಶನ್ ಮಾಡಿದ್ದಾರೆ. ಈ ಘಟನೆ ಬಗ್ಗೆ ಆಸ್ಪತ್ರೆ ಕ್ಷಮೆ ಕೇಳಿದೆ. ಆದ್ರೆ ರೋಗಿಗಳ ಪ್ರಾಣದೊಂದಿಗೆ ಚೆಲ್ಲಾಟವಾಡ್ತಿರೋ ವೈದ್ಯರು ಮತ್ತು ಆಸ್ಪತ್ರೆಯ ಸಿಬ್ಬಂದಿ ರಾಜೀನಾಮೆ ಕೊಡಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...