alex Certify
ಕನ್ನಡ ದುನಿಯಾ       Mobile App
       

Kannada Duniya

ಬಾಲಕನ ಕಿವಿಯಲ್ಲಿತ್ತು ಹುಳಗಳ ರಾಶಿ

ear

ಕಜಕಿಸ್ತಾನದಲ್ಲಿ ನಡೆದ ವಿಚಿತ್ರ ಘಟನೆಯೊಂದು ವೈದ್ಯರನ್ನೇ ಬೆಚ್ಚಿಬೀಳಿಸಿದೆ. ಕೆಲದಿನಗಳಿಂದ ಬಾಲಕನೊಬ್ಬ ಕಿವಿನೋವಿನಿಂದ ಬಳಲುತ್ತಿದ್ದ. ಕೊನೆಗೆ ನೋವು ತಡೆಯಲಾಗದೆ ವೈದ್ಯರ ಬಳಿ ಬಂದಿದ್ದಾನೆ. ಅವನ ಕಿವಿಯೊಳಕ್ಕೆ ಬ್ಯಾಟರಿ ಬಿಟ್ಟು ನೋಡಿದ ಡಾಕ್ಟರ್ ಗೆ ಶಾಕ್ ಕಾದಿತ್ತು.

ಕಿವಿಯಲ್ಲಿ ಹುಳಗಳ ರಾಶಿಯೇ ತುಂಬಿ ಹೋಗಿತ್ತು. ಇನ್ನೂ ವಿಚಿತ್ರ ಅಂದ್ರೆ ಹುಳಗಳು ಸತ್ತಿರಲಿಲ್ಲ, ಜೀವಂತವಾಗಿದ್ವು. ಕೊನೆಗೆ ಬಾಲಕನಿಗೆ ಚಿಕಿತ್ಸೆ ನಡೆಸಿದ ವೈದ್ಯರು ಕಿವಿಯಲ್ಲಿದ್ದ ಡಜನ್ ಗಟ್ಟಲೆ ಹುಳಗಳನ್ನು ಹೊರತೆಗೆದಿದ್ದಾರೆ. ಹುಳಗಳು ಸುಮಾರು 1 ಸೆಂ.ಮೀ. ಉದ್ದವಾಗಿದ್ದವು.

ಚಿಮುಟದ ಸಹಾಯದಿಂದ ಹುಳಗಳನ್ನೆಲ್ಲ ಒಂದೊಂದಾಗಿಯೇ ಹೊರಹಾಕಲಾಗಿದೆ. ಈ ಹುಳಗಳು ಕಿವಿಯಲ್ಲಿ ಹೊಕ್ಕಿದ್ಹೇಗೆ ಅನ್ನೋದು ಮಾತ್ರ ಬಹಿರಂಗವಾಗಿಲ್ಲ. ಈ ದೃಶ್ಯವನ್ನು ಕ್ಯಾಮರಾದಲ್ಲಿ ಸೆರೆಹಿಡಿಯಲಾಗಿದ್ದು, ವಿಡಿಯೋ ಆನ್ ಲೈನ್ ನಲ್ಲಿ ಅಪ್ ಲೋಡ್ ಆಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...