alex Certify
ಕನ್ನಡ ದುನಿಯಾ       Mobile App
       

Kannada Duniya

ವೈದ್ಯೆಗೂ ಕಾರಲ್ಲೇ ಆಯ್ತು ಹೆರಿಗೆ….

dr

ತುಂಬು ಗರ್ಭಿಣಿಯರಿಗೆ ಹೆರಿಗೆ ಸಮಯ ಹತ್ತಿರವಿದ್ದಾಗ ಪ್ರಯಾಣ ಮಾಡುವುದು ಬಹಳ ಕಷ್ಟ. ಯಾವ ಸಮಯದಲ್ಲಾದ್ರೂ ಹೆರಿಗೆಯಾಗುವ ಸಂಭವವೇ ಹೆಚ್ಚಾಗಿರುತ್ತೆ. ನೂರಾರು ಗರ್ಭಿಣಿಯರಿಗೆ ಆಪರೇಷನ್ ಥಿಯೇಟರ್ ನಲ್ಲಿ ಹೆರಿಗೆ ಮಾಡಿಸಿದ್ದ ವೈದ್ಯೆಗೆ ಕಾರಿನಲ್ಲೇ ಡೆಲಿವರಿ ಆಗಿದೆ.

ತುಂಬು ಗರ್ಭಿಣಿಯಾಗಿದ್ದ ಡಾ.ವಿಕ್ಟೋರಿಯಾ ವಿಲಿಯಮ್ಸ್, ಕೆಲಸ ಮುಗಿಸಿ ಮನೆಗೆ ವಾಪಸ್ಸಾಗ್ತಾ ಇದ್ಲು. ಈ ವೇಳೆ ಇದ್ದಕ್ಕಿದ್ದಂತೆ ಅವಳಿಗೆ ಹೆರಿಗೆ ನೋವು ಶುರುವಾಗಿತ್ತು. ಹೇಗೋ ಕಷ್ಟಪಟ್ಟು ಕಾರು ಚಲಾಯಿಸಿಕೊಂಡು ಮನೆಗೆ ಬಂದ ವಿಕ್ಟೋರಿಯಾ, ಪತಿ ಆ್ಯಡಮ್ ಗೆ ವಿಷಯ ತಿಳಿಸಿದ್ದಾಳೆ.

ಕೂಡಲೇ ಆ್ಯಡಮ್ ಅವಳನ್ನು ಕರೆದುಕೊಂಡು ಆಸ್ಪತ್ರೆಯತ್ತ ಹೊರಟ. ಆದ್ರೆ ಅಷ್ಟರಲ್ಲಾಗ್ಲೇ ವಿಕ್ಟೋರಿಯಾಗೆ ಹೆರಿಗೆ ನೋವು ತೀವ್ರಗೊಂಡಿತ್ತು. ರಸ್ತೆಯಲ್ಲಿ ಟ್ರಾಫಿಕ್ ಜಾಮ್ ಇದ್ದಿದ್ರಿಂದ ಆಸ್ಪತ್ರೆಗೆ ಬೇಗ ತಲುಪಲು ಕೂಡ ಸಾಧ್ಯವಾಗಿಲ್ಲ. ಇನ್ನು ತಡೆಯಲು ಅಸಾಧ್ಯ ಎನಿಸಿದಾಗ ವಿಕ್ಟೋರಿಯಾ ಕಾರಿನಲ್ಲೇ ಮಗುವಿಗೆ ಜನ್ಮ ನೀಡಿದ್ದಾಳೆ.

ವೈದ್ಯೆಯಾಗಿದ್ರಿಂದ ಆಕೆಗೆ ಹೆಚ್ಚು ಸಮಸ್ಯೆಯಾಗಿಲ್ಲ. ತಾಯಿ- ಮಗು ಇಬ್ಬರೂ ಆರೋಗ್ಯವಾಗಿದ್ದಾರೆ. ಈ ಘಟನೆ ಬಗ್ಗೆ ಡಾ.ವಿಕ್ಟೋರಿಯಾ ಫೇಸ್ಬುಕ್ ನಲ್ಲಿ ಪೋಸ್ಟ್ ಮಾಡಿದ್ದಾಳೆ.

Jobs by neuvoo.co.in

Subscribe Newsletter

Get latest updates on your inbox...

Opinion Poll

  • ವಿಐಪಿ ಕಾರ್ ಮೇಲಿನ ಕೆಂಪು ದೀಪ ತೆರವುಗೊಳಿಸಿದರೆ ಸಾರ್ವಜನಿಕರ ಸಮಸ್ಯೆಗೆ ಪರಿಹಾರ ಸಿಗಲಿದೆಯೇ..?

    View Results

    Loading ... Loading ...