alex Certify
ಕನ್ನಡ ದುನಿಯಾ       Mobile App
       

Kannada Duniya

ನೀವು ನೈಟ್ ಶಿಫ್ಟ್ ಮಾಡುವವರಾಗಿದ್ದರೆ ಈ ಸುದ್ದಿಯನ್ನು ತಪ್ಪದೇ ಓದಿ

ನೀವು ಆಗಾಗ್ಗೆ ರಾತ್ರಿ ಪಾಳಯದಲ್ಲಿ ಕೆಲಸ ಮಾಡುತ್ತೀರಾ…? ಹಾಗಿದ್ರೆ ಎಚ್ಚರ. ನಿಮಗೆ ಬಹುಬೇಗನೇ ಸಕ್ಕರೆ ಕಾಯಿಲೆ ಬರಬಹುದು. ಹೌದು ನೈಟ್ ಶಿಫ್ಟ್ ಸೇರಿದಂತೆ ಶಿಫ್ಟ್ ವರ್ಕ್ ಮಾಡುವ ಶೇ. 44 ಜನರಲ್ಲಿ ಟೈಪ್ 2 ಡಯಾಬಿಟೀಸ್ ಅಂದರೆ ರಕ್ತದಲ್ಲಿ ಗ್ಲೂಕೋಸ್ ಪ್ರಮಾಣ ಹೆಚ್ಚಾಗುವ ಸಂಭವ ಇದೆ ಅಂತಾ ಸಂಶೋಧಕರು ಎಚ್ಚರಿಕೆ ನೀಡಿದ್ದಾರೆ.

ಕೊಲರಾಡೋ ಬೈಲ್ಡರ್ ವಿಶ್ವವಿದ್ಯಾಲಯದಲ್ಲಿನ ಸಂಶೋಧಕರು ಸುಮಾರು 2 ಲಕ್ಷ 70 ಸಾವಿರಕ್ಕೂ ಹೆಚ್ಚು ಜನರನ್ನು ಪರೀಕ್ಷೆಗೊಳಪಡಿಸಿದಾಗ ಅವರಲ್ಲಿ 70 ಸಾವಿರ ಜನರ ಉದ್ಯೋಗದ ವಿವರ ಹಾಗೂ 44 ಸಾವಿರ ಜನರ ಅನುವಂಶಿಕ ದಾಖಲೆ ಪರಿಶೀಲಿಸಲಾಗಿತ್ತು. 6 ಸಾವಿರ ಜನರಿಗೆ ಅನುವಂಶಿಕವಾಗಿ ಟೈಪ್ 2 ಡಯಾಬಿಟೀಸ್ ಇರುವುದು ಗೊತ್ತಾಗಿದೆ. ಹೀಗೆ ಅನುವಂಶಿಕ ಹಿನ್ನೆಲೆ ಇರುವವರಿಗೆ 4 ಪಟ್ಟು ಹೆಚ್ಚು ಬರುವ ಸಾಧ್ಯತೆ ಇದೆ ಅಂತಾ ಸಂಶೋಧನೆಯಲ್ಲಿ ಗೊತ್ತಾಗಿದೆ.

ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ 1980 ರಿಂದೀಚೆಗೆ ಡಯಾಬಿಟೀಸ್ ಪ್ರಮಾಣ ದ್ವಿಗುಣಗೊಂಡಿದೆ.  ಹಾಗಾಗಿ ಶಿಫ್ಟ್ ಆಧಾರದಲ್ಲಿ ಕೆಲಸ ಮಾಡುವವರು ಹಾಗೂ ರಾತ್ರಿ ಪಾಳಯದಲ್ಲಿ ಕೆಲಸ ಮಾಡುವವರು ಈ ವಿಷಯ ಗಮನದಲ್ಲಿಟ್ಟುಕೊಂಡರೆ ಒಳಿತು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...