alex Certify ಎ‌ಚ್ಚರ….! ಅತಿಯಾದ ಪೋರ್ನ್ ವೀಕ್ಷಿಸುವ ಅಭ್ಯಾಸವಿದ್ರೆ ಈ ಅಪಾಯ ತಪ್ಪಿದ್ದಲ್ಲ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಎ‌ಚ್ಚರ….! ಅತಿಯಾದ ಪೋರ್ನ್ ವೀಕ್ಷಿಸುವ ಅಭ್ಯಾಸವಿದ್ರೆ ಈ ಅಪಾಯ ತಪ್ಪಿದ್ದಲ್ಲ

ಕೆಲವರಿಗೆ ಅಶ್ಲೀಲ ವಿಡಿಯೋಗಳನ್ನು ವೀಕ್ಷಿಸುವುದೇ ದೊಡ್ಡ ಚಟವಾಗಿಬಿಟ್ಟಿರುತ್ತದೆ. ಪೋರ್ನ್ ನೋಡದೇ ದಿನ ಕಳೆಯುವುದೇ ಅಸಾಧ್ಯ ಎಂಬಂತಹ ಪರಿಸ್ಥಿತಿ. ಇಂಥವರ ಮೆದುಳಿನ ಮೇಲಾಗುವ ದುಷ್ಪರಿಣಾಮವನ್ನು ನೀವು ಕಲ್ಪಿಸಿಕೊಳ್ಳುವುದು ಕೂಡ ಅಸಾಧ್ಯ.

ಪೋರ್ನ್ ವಿಡಿಯೋ ನೋಡುವುದರಿಂದ ನಿಮ್ಮ ಮೆದುಳಿನ ವೈರಿಂಗ್ ನಲ್ಲಿ ಬದಲಾವಣೆಗಳಾಗುತ್ತವೆ. ಪ್ರಿಫ್ರಂಟಲ್ ಕಾರ್ಟೆಕ್ಸ್ ಎಂಬ ಮೆದುಳಿನ ಬಹುಮುಖ್ಯ ಭಾಗಕ್ಕೆ ಹಾನಿಯಾಗುತ್ತದೆ. ಪ್ರಚೋದನೆ, ಇಚ್ಛಾಶಕ್ತಿ ಎಲ್ಲವನ್ನೂ ನಿಯಂತ್ರಿಸುವ ಭಾಗ ಇದು. ನಿಯಮಿತವಾಗಿ ಅಶ್ಲೀಲ ವಿಡಿಯೋ ನೋಡುವ ಅಭ್ಯಾಸ, ನಿಮ್ಮ ನಿರ್ಧಾರ ತೆಗೆದುಕೊಳ್ಳುವಿಕೆಯ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ.

ಈ ಅಭ್ಯಾಸವು ನಿಮ್ಮ ಮೆದುಳನ್ನು ಬಾಲಾಪರಾಧಿ ಸ್ಥಿತಿಗೆ ತರಬಹುದು. ಅಶ್ಲೀಲ ಸೈಟ್‌ಗಳು ವಯಸ್ಕ ವೀಡಿಯೊಗಳನ್ನು ನಿಮಗೆ ಸುಲಭವಾಗಿ ಲಭ್ಯವಾಗುವಂತೆ ಮಾಡುವ ಮೂಲಕ ಲೈಂಗಿಕ ತೃಪ್ತಿ ಮತ್ತು ಸಂತೃಪ್ತಿಯನ್ನು ನೀಡುವುದಾಗಿ ಭರವಸೆ ನೀಡುತ್ತವೆ. ಆದರೆ ಅದರ ಪರಿಣಾಮ ಮಾತ್ರ ತದ್ವಿರುದ್ಧವಾಗಿರುತ್ತದೆ.

ಅಶ್ಲೀಲತೆಯನ್ನು ವೀಕ್ಷಿಸಲು ನೀವು ಹಂಬಲಿಸಲಾರಂಭಿಸುತ್ತೀರಿ. ಇದರಿಂದಾಗುವ ನರವೈಜ್ಞಾನಿಕ ಪರಿಣಾಮಗಳಿಂದ ನೀವು ಮಾನಸಿಕ ಅಸ್ವಸ್ಥರಾಗಬಹುದು. ಉದ್ವಿಗ್ನತೆ, ಖಿನ್ನತೆ ಸೇರಿದಂತೆ ಹಲವು ಬಗೆಯ ಸಮಸ್ಯೆಗಳು ನಿಮ್ಮನ್ನು ಕಾಡಲಾರಂಭಿಸುತ್ತವೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...