alex Certify
ಕನ್ನಡ ದುನಿಯಾ       Mobile App
       

Kannada Duniya

ಅಚ್ಚರಿಯಾಗುವಂತಿದೆ ಡೈವೋರ್ಸ್ ಗೆ ಈಕೆ ಕೊಟ್ಟ ಕಾರಣ

divorce 5

ಈಗಂತೂ ಫಾಸ್ಟ್ ದುನಿಯಾ. ಲವ್, ಮದುವೆ, ವಿಚ್ಛೇದನ ಪಡೆಯುವುದು ನೀರು ಕುಡಿದಷ್ಟೇ ಸುಲಭ. ಗಂಡ ಹೆಂಡತಿಗೆ ವಿಚ್ಛೇದನ ನೀಡಲು ಇಂತಹುದೇ ಕಾರಣ ಬೇಕಿಲ್ಲ. ಸಣ್ಣಪುಟ್ಟ ವಿಷಯಗಳಿಗೂ ನ್ಯಾಯಾಲಯದ ಮೆಟ್ಟಿಲೇರಿ ವಿಚ್ಛೇದನ ಪಡೆದುಕೊಳ್ಳುತ್ತಾರೆ.

ಗಂಡ ಹೆಂಡತಿ ಜಗಳ ಉಂಡು ಮಲಗುವತನಕ ಎನ್ನುವ ಮಾತು ಹಳೆಯದಾಗಿದೆ. ಈಗೆನಿದ್ದರೂ ನಿತ್ಯವೂ ಜಗಳ, ಹಾಗಾಗಿ ಡೈವೋರ್ಸ್ ಕೊಡುವವರ ಸಂಖ್ಯೆಯೂ ಹೆಚ್ಚಿದೆ. ಡೈವೋರ್ಸ್ ಕೊಡಲು ನಾನಾ ಕಾರಣವಿರುತ್ತವೆ. ಆದರೆ, ಈ ಮಹಿಳೆ ಗಂಡನಿಗೆ ವಿಚ್ಛೇದನ ಕೊಡಲು ಕೊಟ್ಟಿರುವ ಕಾರಣ, ಆತ ಸುಂದರವಾಗಿರುವುದು. ಹೌದು, ತನ್ನ ಪತಿ ಸುಂದರವಾಗಿರುವುದರಿಂದ ಕಂಡ ಕಂಡ ಹೆಣ್ಣುಮಕ್ಕಳೆಲ್ಲಾ ಆತನನ್ನು ದಿಟ್ಟಿಸಿ ನೋಡುತ್ತಾರೆ. ಇದನ್ನು ಸಹಿಸಿಕೊಳ್ಳಲು ಆಗುತ್ತಿಲ್ಲ. ಡೈವೋರ್ಸ್ ಕೊಡಿ ಎಂದು ಮಹಿಳೆಯೊಬ್ಬಳು ಸೌದಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾಳೆ.

ಗಂಡ ಸುಂದರವಾಗಿದ್ದು, ಆತನಿಗೆ ಬೇರೆ ಸಂಬಂಧ ಇರಬಹುದೆಂಬ ಅನುಮಾನ ಕೂಡ ಇದೆ. ಅಲ್ಲದೇ, ಎಲ್ಲರೂ ಆತನನ್ನು ನೋಡುತ್ತಾರೆ. ಇದರಿಂದಾಗಿ ಮಾನಸಿಕ ತೊಳಲಾಟಕ್ಕೆ ಸಿಲುಕಿರುವ ನನಗೆ ಡೈವೋರ್ಸ್ ಕೊಡಬೇಕೆಂದು ಆಕೆ ನ್ಯಾಯಾಲಯಕ್ಕೆ ಮನವಿ ಮಾಡಿದ್ದಾಳೆ ಎನ್ನಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...