alex Certify BIG NEWS:‌ ʼಕೊರೊನಾʼ ಕ್ಕಿಂತಲೂ ಮಾರಕ ವೈರಸ್​ ಬಗ್ಗೆ ಎಚ್ಚರಿಕೆ ನೀಡಿದೆ ತಜ್ಞರ ತಂಡ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS:‌ ʼಕೊರೊನಾʼ ಕ್ಕಿಂತಲೂ ಮಾರಕ ವೈರಸ್​ ಬಗ್ಗೆ ಎಚ್ಚರಿಕೆ ನೀಡಿದೆ ತಜ್ಞರ ತಂಡ..!

ಕೆಲವೇ ಕೆಲವು ದಿನಗಳ ಹಿಂದೆ ವಿಶ್ವ ಆರೋಗ್ಯ ಸಂಸ್ಥೆ ಕೋವಿಡ್​​ 19 ಸಾಂಕ್ರಾಮಿಕ ಅಂತ್ಯವಾಗಿದೆ ಎಂಬ ಘೋಷಣೆಯನ್ನು ಮಾಡಿದೆ. ಜಾಗತಿಕವಾಗಿ ಭಾರೀ ದೊಡ್ಡ ಆಘಾತ ನೀಡಿದ್ದ ಈ ಸಾಂಕ್ರಾಮಿಕ ರೋಗವು ಅನೇಕರ ಜೀವವನ್ನು ತೆಗೆದುಕೊಂಡಿತ್ತು.

ಕೊರೊನಾ ಮಾರಿಯಿಂದ ಜಗತ್ತು ಸುಧಾರಿಸಿಕೊಂಡ ಬೆನ್ನಲ್ಲೇ ಇದೀಗ ತಜ್ಞರು ಹೊಸ ಸಾಂಕ್ರಾಮಿಕದ ಆತಂಕವನ್ನು ಹೊರಹಾಕಿದ್ದಾರೆ. ಮಾತ್ರವಲ್ಲದೇ ಡಿಸೀಸ್​ ಎಕ್ಸ್​ ಎಂಬ ಈ ಹೊಸ ವೈರಸ್​ ಕೊರೊನಾಗಿಂತಲೂ 20 ಪಟ್ಟು ಹೆಚ್ಚು ಮಾರಣಾಂತಿಕ ಎಂದು ಹೇಳಿದ್ದಾರೆ.

ಇದು ಕೋವಿಡ್​ 19ನಂತೆಯೇ ಮತ್ತೊಂದು ಸಾಂಕ್ರಾಮಿಕ ಕಾಯಿಲೆಯಾಗಿದೆ. ಇದು ಲಕ್ಷಾಂತರ ಜನರ ಸಾವಿಗೆ ಕಾರಣವಾಗಬಹುದು ಎಂದು ಬ್ರಿಟನ್​​ನ ಆರೋಗ್ಯ ತಜ್ಞರು ಎಚ್ಚರಿಕೆ ನೀಡಿದ್ದಾರೆ. ಇದು ಸ್ಪ್ಯಾನಿಷ್​ ಜ್ವರದಂತೆಯೆ ವಿನಾಶಕಾರಿಯಾಗಿದೆ ಎಂದು ಡಿಸೀಸ್​ ಎಕ್ಸ್​ ಬಗ್ಗೆ ತಜ್ಞರು ಎಚ್ಚರಿಕೆ ನೀಡಿದ್ದಾರೆ.

ಡಿಸೀಸ್​ ಎಕ್ಸ್​​ ಬಗ್ಗೆ ನೀವು ತಿಳಿದುಕೊಳ್ಳಲೇಬೇಕಾದ ಅಂಶಗಳಿವು

ವಿಶ್ವ ಆರೋಗ್ಯ ಸಂಸ್ಥೆಯ ವೆಬ್​ಸೈಟ್​ನಲ್ಲಿರುವ ಮಾಹಿತಿಯ ಪ್ರಕಾರ, ಡಿಸೀಸ್​ ಎಕ್ಸ್​​ ಮುಂದಿನ ದಿನಗಳಲ್ಲಿ ಅಂತಾರಾಷ್ಟ್ರೀಯ ಸಾಂಕ್ರಾಮಿಕ ರೋಗಕ್ಕೆ ಕಾರಣವಾಗಬಹುದು. ಇದು ಹೊಸ ಏಜೆಂಟ್​ ವೈರಸ್​, ಬ್ಯಾಕ್ಟೀರಿಯಾ ಅಥವಾ ಫಂಗಸ್​ ಆಗಿರಬಹುದು. ಇದು ಆರ್​ಎನ್​ಎ ವೈರಸ್​ಗೆ ಸಂಬಂಧಿಸಿದ ಝೂನೋಟಿಕ್​ ಕಾಯಿಲೆಗೆ ಸಂಬಧಿಸಿದೆ.

ಕಾಮಾಲೆ ರೋಗದ ಮೂಲಕ ಮೊಟ್ಟ ಮೊದಲ ಝೂನೋಟಿಕ್​ ವೈರಸ್​ನ್ನು 1901ರಲ್ಲಿ ಗುರುತಿಸಲಾಗಿತ್ತು. ಹೆಚ್ಚುತ್ತಿರುವ ವೈರಸ್​ಗಳ ಸಂಖ್ಯೆಯು ಪರಿಸರ ನಾಶ ಹಾಗೂ ವನ್ಯಜೀವಿಗಳ ಮಾರಾಟದ ಪರಿಣಾಮವಾಗಿದೆ ಎಂಬುದು ತಜ್ಞರ ಅನಿಸಿಕೆಯಾಗಿದೆ.

ವಿಶ್ವ ಆರೋಗ್ಯ ಸಂಸ್ಥೆಯ ಆರ್​ & ಡಿ ಸೈಂಟಿಫಿಕ್​ ಅಡ್ವೈಸರಿ ಗ್ರೂಪ್​ ಎಂದು ಕರೆಯಲ್ಪಡುವ ವಿಜ್ಞಾನಿಗಳ ಗುಂಪು ಈ ವೈರಸ್ ಬಗ್ಗೆ ಅಧ್ಯಯನ ಮಾಡುತ್ತಿದೆ. ಈ ವೈರಸ್​ನ್ನು 2018ರ ಫೆಬ್ರವರಿಯಲ್ಲಿಯೇ ಪತ್ತೆ ಮಾಡಲಾಗಿದೆ. ಇದು ಭವಿಷ್ಯದಲ್ಲಿ ಸಾಂಕ್ರಾಮಿಕ ರೋಗವನ್ನು ಉಂಟು ಮಾಡುವ ಸಾಮರ್ಥ್ಯ ಹೊಂದಿದೆ ಎನ್ನಲಾಗಿದೆ .

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...