alex Certify
ಕನ್ನಡ ದುನಿಯಾ       Mobile App
       

Kannada Duniya

ಸೂಪರ್ ಮೂನ್ ವೇಳೆ ಕ್ಯಾಮರಾದಲ್ಲಿ ಸೆರೆಯಾಗಿದೆ ‘ಏಲಿಯನ್’…?

ಭೂಮಿ ಹೊರತುಪಡಿಸಿ ಬೇರೆ ಗ್ರಹಗಳಲ್ಲಿ ಜೀವಿಗಳು ವಾಸವಾಗಿದ್ದರೋ ಇಲ್ಲವೋ ಎಂಬುದರ ಕುರಿತು ಆನೇಕ ಚರ್ಚೆಗಳು ನಡೆದಿವೆ. ಹಲವರು ಈ ಹಿಂದೆ ತಾವು ಯುಎಫ್ಓ ನೋಡಿರುವುದಾಗಿ ಹೇಳಿ ಅದರ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಮಾಡಿದ್ದು, ಅದರ ಸತ್ಯಾಸತ್ಯತೆ ಮಾತ್ರ ದೃಢಪಟ್ಟಿಲ್ಲ. ಮತ್ತೆ ಕೆಲವರು ತಾವು ಅನ್ಯ ಜೀವಿ ಗ್ರಹಗಳನ್ನು ಭೇಟಿ ಮಾಡಿರುವುದಾಗಿ ಹೇಳಿಕೊಂಡಿದ್ದರೂ ಇದಕ್ಕೂ ಯಾವುದೇ ಸಾಕ್ಷ್ಯ ದೊರಕಿಲ್ಲ.

ಅನ್ಯ ಗ್ರಹ ಜೀವಿಗಳ ಕುರಿತು ಕುತೂಹಲ ಇನ್ನೂ ಹಾಗೆಯೇ ಉಳಿದುಕೊಂಡಿರುವುದರ ಮಧ್ಯೆ ಜನವರಿ 31 ರಂದು ಸಂಭವಿಸಿದ ಸೂಪರ್ ಮೂನ್ ಸಂದರ್ಭದಲ್ಲಿ ಕ್ಯಾಮರಾದಲ್ಲಿ ಸೆರೆಯಾಗಿರುವ ದೃಶ್ಯವೊಂದು ಅನ್ಯ ಗ್ರಹ ಜೀವಿಗಳ ಕುರಿತ ಚರ್ಚೆ ಮತ್ತೆ ಮುನ್ನೆಲೆಗೆ ಬರುವಂತೆ ಮಾಡಿದೆ.

ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಸೂಪರ್ ಮೂನ್ ವೇಳೆ ಬೆಳಕಿನ ಆಕಾರವೊಂದು ಅತಿ ವೇಗವಾಗಿ ಚಲಿಸಿರುವುದು ಕ್ಯಾಮರಾದಲ್ಲಿ ಸೆರೆಯಾಗಿದೆ. ಇದು ಅನ್ಯ ಗ್ರಹ ಜೀವಿಗಳದ್ದೇ ಎಂದು ವಾದಿಸುತ್ತಿರುವವರು ಅಷ್ಟು ವೇಗದಲ್ಲಿ ಇದು ಚಲಿಸಿರುವ ಕಾರಣ ಇದು ಮಾನವ ನಿರ್ಮಿತವಲ್ಲವೆಂದು ಹೇಳುತ್ತಿದ್ದಾರೆ. 150 ವರ್ಷಗಳ ಬಳಿಕ ಬಾನಂಗಳದಲ್ಲಿ ಸಂಭವಿಸಿದ ಅಪರೂಪದ ವಿದ್ಯಾಮಾನ ‘ಸೂಪರ್ ಮೂನ್’ ನ್ನು ವಿಶ್ವದಾದ್ಯಂತ ಜನತೆ ಕಣ್ತುಂಬಿಕೊಂಡಿದ್ದರ ಮಧ್ಯೆ ಈ ವಿಡಿಯೋ ಈಗ ಕುತೂಹಲಕ್ಕೆ ಕಾರಣವಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...