alex Certify
ಕನ್ನಡ ದುನಿಯಾ       Mobile App
       

Kannada Duniya

ಕ್ರಿಕೆಟ್ ಬೆಟ್ಟಿಂಗ್ ನಲ್ಲಿ ಸೋತವನು ಮಾಡಿದ್ದ ಖತರ್ನಾಕ್ ಪ್ಲಾನ್

ಕ್ರಿಕೆಟ್ ಬೆಟ್ಟಿಂಗ್ ನಲ್ಲಿ ಸೋತು ಹಣ ಕೊಡುವುದನ್ನು ತಪ್ಪಿಸಿಕೊಳ್ಳಲು ತಾನು ಕೊಲೆಯಾದಂತೆ ನಾಟಕವಾಡಿದ್ದ ವ್ಯಕ್ತಿಯನ್ನು ಬಾಂಗ್ಲಾದೇಶ ಪೊಲೀಸರು ಬಂಧಿಸಿದ್ದಾರೆ. ಅಡೆಲ್ ಶಿಕ್ದರ್ ಎಂಬಾತ ಬೆಟ್ಟಿಂಗ್ ನಲ್ಲಿ ಸೋತಿದ್ದ. ಒಪ್ಪಂದದಂತೆ ಎದುರಾಳಿಗೆ 1800 ಡಾಲರ್ ಹಣ ಕೊಡಬೇಕಿತ್ತು.

ಅದರಿಂದ ತಪ್ಪಿಸಿಕೊಳ್ಳಲು ಮೈಮೇಲೆ ಕೆಂಪನೆಯ ಹಣ್ಣಿನ ಜ್ಯೂಸ್ ಸುರಿದುಕೊಂಡು ತಾನು ಕೊಲೆಯಾಗಿ ಹೋದಂತೆ ನಟಿಸಿದ್ದಾನೆ. ಆ ವಿಡಿಯೋಗಳನ್ನೆಲ್ಲ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡಿದ್ದಾನೆ.

ಇದಕ್ಕಾಗಿ ವಿಡಿಯೋಗ್ರಾಫರ್ ಹಾಗೂ ಮೇಕಪ್ ಆರ್ಟಿಸ್ಟ್ ಗಳನ್ನು ಆತ ಹೈರ್ ಮಾಡಿಕೊಂಡಿದ್ದ. ಮೂವರು ವ್ಯಕ್ತಿಗಳು ಸೇರಿ ಶಿಕ್ದರ್ ನನ್ನು ಕೊಲೆ ಮಾಡಿಸಿದಂತೆ ಆ್ಯಕ್ಟ್ ಮಾಡಿಸಿದ್ದ. ಕತ್ತು ಸೀಳಿದ್ದ ಫೋಟೋಗಳನ್ನು ಬೇಕೆಂತಲೇ ತಾನು ಬೆಟ್ಟಿಂಗ್ ಕಟ್ಟಿದ್ದ ವ್ಯಕ್ತಿಗೂ ಕಳಿಸಿದ್ದ.

ತಾನೇ ಧ್ವನಿ ಬದಲಾಯಿಸಿಕೊಂಡು ಫೋನ್ ಮಾಡಿ, ಮೃತದೇಹ ಚಿತ್ತಗಾಂಗ್ ಬಳಿಯಿದೆ ಅಂತಾ ಸುಳ್ಳು ಹೇಳಿದ್ದಾನೆ. ಗಾಬರಿ ಬಿದ್ದ ಮನೆಯವರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಪೊಲೀಸ್ ತನಿಖೆ ವೇಳೆ ಶಿಕ್ದರ್ ಮಾಡಿದ್ದ ಮಾಸ್ಟರ್ ಪ್ಲಾನ್ ಬಯಲಾಗಿದೆ. ನಿಧಾಸ್ ಟ್ರೋಫಿ ಫೈನಲ್ ನ ಭಾರತ-ಬಾಂಗ್ಲಾ ಪಂದ್ಯದಲ್ಲಿ ಆತ ಬೆಟ್ಟಿಂಗ್ ಕಟ್ಟಿದ್ದ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...