alex Certify
ಕನ್ನಡ ದುನಿಯಾ       Mobile App
       

Kannada Duniya

ಅಮೆರಿಕಾ ಗ್ರೀನ್ ಕಾರ್ಡ್ ಗಾಗಿ ಕಾಯುತ್ತಿರುವವರ ಪಟ್ಟಿಯಲ್ಲಿ ಶೇ.75 ರಷ್ಟು ಮಂದಿ ಭಾರತೀಯರು…!

ದಿನ ಕಳೆದಂತೆ ಅಮೆರಿಕಾದ ವಲಸೆ ನಿಯಮಗಳು ಕಠಿಣವಾಗುತ್ತಿದೆ. ಅಮೆರಿಕಾದಲ್ಲಿ ನೆಲೆಸಲು ಗ್ರೀನ್ ಕಾರ್ಡ್ ಗಾಗಿ ಕಾಯುತ್ತಿರುವ ಭಾರತೀಯರ ಸಂಖ್ಯೆ ಹೆಚ್ಚಾಗಿದೆ. ಈ ಗ್ರೀನ್ ಕಾರ್ಡ್ ಪಡೆಯುವವರ ಪಟ್ಟಿಯಲ್ಲಿ ಶೇ. 75 ರಷ್ಟು ಮಂದಿ ಭಾರತೀಯ ನಾಗರಿಕರಿದ್ದಾರೆ.  ಗ್ರೀನ್ ಕಾರ್ಡ್ ಪಡೆಯುವಲ್ಲೂ ಭಾರತೀಯರಿಗೆ ಹೆಚ್ಚಿನ ಅವಕಾಶ ದೊರೆಯುತ್ತಿದೆ.

ಮೇ 2018 ರವರೆಗೆ ಒಟ್ಟು 395,025 ಮಂದಿ ಉದ್ಯೋಗ ಆಧಾರದ ಮೇಲೆ ಗ್ರೀನ್ ಕಾರ್ಡ್ ಪಡೆಯಲು ವೇಯ್ಟಿಂಗ್ ಲಿಸ್ಟ್ ನಲ್ಲಿದ್ದು, ಇವರಲ್ಲಿ 306,601 ಮಂದಿ ಭಾರತೀಯರಾಗಿದ್ದಾರೆ.

ಅಮೆರಿಕಾ ನಾಗರೀಕ ಮತ್ತು ವಲಸೆ ಸೇವೆ ಬಿಡುಗಡೆಗೊಳಿಸಿದ ವರದಿಯ ಪ್ರಕಾರ, ಈ ಪಟ್ಟಿಯಲ್ಲಿ ವಲಸೆ ಅರ್ಜಿ ಸಲ್ಲಿಸಿರುವವರಿಗೆ ಅವಕಾಶವಿಲ್ಲ ಎಂದು ತಿಳಿಸಿದೆ. ಅಮೆರಿಕಾದಲ್ಲಿ ಶಾಶ್ವತವಾಗಿ ನೆಲೆಸಲು ಈ ಗ್ರೀನ್ ಕಾರ್ಡ್ ನೀಡಲಾಗುತ್ತದೆ. ಇದರಿಂದ ವಿದೇಶಿ ರಾಷ್ಟ್ರೀಯರು ಅಮೆರಿಕಾದಲ್ಲಿ ಕಾನೂನಿನ ಪ್ರಕಾರ ನೆಲೆಸಬಹುದು. ಅಮೆರಿಕಾದ ನಾಗರಿಕ ಹಕ್ಕು ಪಡೆಯಲು ಗ್ರೀನ್ ಕಾರ್ಡ್ ಮೊದಲನೆ ಹಂತವಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...