alex Certify
ಕನ್ನಡ ದುನಿಯಾ       Mobile App
       

Kannada Duniya

ಮನ ಕಲಕುತ್ತೆ ಈ ವಧುವಿನ ಹೃದಯವಿದ್ರಾವಕ ಕಥೆ

ನೂರಾರು ಕನಸು, ಹಲವು‌ ಬಯಕೆಯೊಂದಿಗೆ ವಿವಾಹ ಬಂಧನದಲ್ಲಿ ಒಂದಾಗಲು ಪ್ರೇಮಿಗಳು ಬಯಸಿದ್ದರೆ, ಅ ದೇವರು ಇನ್ನೊಂದು ಬಯಸಿದ್ದ. ಆದರೆ ವರ ಅಪಘಾತದಲ್ಲಿ ಮೃತನಾದರೂ, ಆತನ ಕೊನೆಯಾಸೆ ಈಡೇರಿಸುವುದನ್ನು ಮಾತ್ರ ವಧು ಮರೆತಿಲ್ಲ.

ಹೌದು, ಇಂಡೋನೇಷ್ಯಾದ ಇನ್ತಾಂ ಸೈರಿ ತನ್ನ ಕನಸಿನ ಹುಡುಗ ರಿಯೋ ನಂದಾನೊಂದಿಗೆ ಮದುವೆಯಾಗಲು ಸಿದ್ಧತೆ ನಡೆಸಿಕೊಂಡಿದ್ದಾಳೆ. ಆದರೆ ಮದುವೆಗೆ ಒಂದು ದಿನದ ಮೊದಲು, ವರ ವಿಮಾನ‌ ಅಪಘಾತದಲ್ಲಿ ಮೃತಪಟ್ಟಿದ್ದಾನೆ. ವರನಿಗೆ ವಧು ನೀಡಿದ್ದ‌ ಮಾತಿನಂತೆ, ಆಕೆ ವಧುವಿನಂತೆ ಡ್ರೆಸ್ ಮಾಡಿಕೊಂಡು ಅತೀವ ದುಃಖದಲ್ಲಿ ಫೋಟೋ ಫೋಸ್ ನೀಡಿದ್ದಾಳೆ

ವರ‌ ರಿಯೋ ಮದುವೆಗೆ ಒಂದು ದಿನ ಮೊದಲು‌ ಜಕರ್ತಾದಿಂದ ಮದುವೆಯ ಸ್ಥಳಕ್ಕೆ ತೆರಳಲು ವಿಮಾನ ಏರಿದ್ದಾನೆ. ಆದರೆ ಕೆಲವೇ ನಿಮಿಷಗಳಲ್ಲಿ‌ ವಿಮಾನ‌ ಆಕಾಶದಿಂದ ಸಮುದ್ರದಲ್ಲಿ ಬಿದ್ದಿದೆ. ಈ ವಿಷಯ‌ ತಿಳಿದ ವಧು ಸೈರಿ, ತನ್ನೆಲ್ಲ ದುಃಖವನ್ನು ಬದಿಗೊತ್ತಿ, ‌ರಿಯೋ‌ ಕೇಳಿದ್ದ ಕೊನೆಯಾಸೆ ಈಡೇರಿಸಿ, ತನ್ನ ಇನ್ಸ್ಟಾಗ್ರಾಂ ಖಾತೆಯಲ್ಲಿ ವಧುವಿನ ರೀತಿಯಲ್ಲಿ ‌ಶೃಂಗಾರಗೊಂಡ ಫೋಟೊ ಹಾಕಿದ್ದಾಳೆ.

ದುರ್ಘಟನೆ ನಡೆಯುವ ಹಿಂದಿನ ದಿನ, ರಿಯೋ ತಮಾಷೆಗೆ ನಾನು ಮದುವೆಗೆ ಬರದಿದ್ದರೂ, ನೀವು ವಧುವಿನಂತೆ ಶೃಂಗಾರಗೊಂಡು, ಫೋಟೋ ತೆಗೆಸಿಕೊಂಡು, ಕಳುಹಿಸಬೇಕು ಎಂದಿದ್ದನಂತೆ. ಅದಕ್ಕೆ ಎಲ್ಲ ದು:ಖವನ್ನು ಅದುಮಿಟ್ಟುಕೊಂಡು ವಧು‌ ಫೋಟೋ ಶೂಟ್ ಮಾಡಿಸಿಕೊಂಡಿದ್ದಾಳೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...