alex Certify
ಕನ್ನಡ ದುನಿಯಾ       Mobile App
       

Kannada Duniya

ಬಾಲಿವುಡ್ ಹಾಡಿಗೆ ವಿದೇಶಿಗನ ಬಿಂದಾಸ್ ಸ್ಟೆಪ್ಸ್…!

ವಿಶ್ವದಲ್ಲಿ ಬಾಲಿವುಡ್ ಹಾಡುಗಳಿಗೆ ಹೆಚ್ಚು ಜನಪ್ರಿಯತೆ ಇದೆ. ಭಾರತೀಯ ಸಂಗೀತ ವಿದೇಶಿಗರಿಗೂ ಮೋಡಿ ಮಾಡಿದೆ ಎನ್ನೋದಕ್ಕೆ ಮತ್ತೊಂದು ಉದಾಹರಣೆ ಸಿಕ್ಕಿದೆ. ವಿದೇಶಿಯೊಬ್ಬ ಕಲ್ ಹೋ ನಾ ಹೋ ಹಾಡಿಗೆ ಹೆಜ್ಜೆ ಹಾಕಿದ್ದು ಸದ್ಯ ಸಕತ್ ವೈರಲ್ ಆಗಿದೆ.

ಬಾಲಿವುಡ್ ಹಾಡುಗಳು ಪಾರ್ಟಿ ವೇಳೆ ಕೇಳೋದು ಕಾಮನ್. ಕರಣ್ ಜೋಹರ್ ಹಾಗೂ ಸೂರಜ್ ಬಾರ್ಜತ್ಯಾ ತಮ್ಮ ಹಿಟ್ ಚಿತ್ರಗಳಲ್ಲಿ ಕೆಲವು ಒಳ್ಳೆ ಹಾಡುಗಳನ್ನು ನೀಡಿದ್ದಾರೆ. ಅದ್ರಲ್ಲಿ ಕಲ್ ಹೋ ನಾ ಹೋ ಚಿತ್ರದ `ಮಾಹಿ ವೇ’ ಕೂಡಾ ಒಂದು. ಶಾರೂಕ್ ಖಾನ್, ಸೈಫ್ ಅಲಿ ಖಾನ್ ಹಾಗೂ ಪ್ರೀತಿ ಝಿಂಟಾ ಈ ಹಾಡಿಗೆ ಹೆಜ್ಜೆ ಹಾಕಿದ್ದಾರೆ.

ಈ ಹಾಡಿಗೆ ಲಂಡನ್ ನಲ್ಲಿ ಒಬ್ಬ ಯುವಕ ಹೆಜ್ಜೆ ಹಾಕಿ ಎಲ್ಲರ ಮನ ಗೆದ್ದಿದ್ದಾನೆ. ಯುವಕ ಮೊದಲು ಹಾಡನ್ನು ನೋಡಿ, ತದನಂತರ ಸ್ಟೆಪ್ಸ್ ಹಾಕಲು ಆರಂಭಿಸಿದ್ದಾನೆ. ಆತನ ಸ್ನೇಹಿತರು ಅವನ ಡ್ಯಾನ್ಸ್ ರೆಕಾರ್ಡ್ ಮಾಡಿ ಸಾಮಾಜಿಕ ತಾಣದಲ್ಲಿ ಅಪ್ ಲೋಡ್ ಮಾಡಿದ್ದಾರೆ. ನಿಜಕ್ಕೂ ಈತನ ವಿಡಿಯೋ ನೋಡಿದ್ರೆ, ಪ್ರೀತಿ ಝಿಂಟಾ ನೆನಪಾಗದೆ ಇರದು.

ಈ ವಿಡಿಯೋ ನೋಡಿದ ಭಾರತೀಯ ಅಭಿಮಾನಿಗಳು ರಿ-ಟ್ವಿಟ್ ಮಾಡಿದ್ದು, ಎಂಜಾಯ್ ಮಾಡಿದ್ದಾರೆ. ಸದ್ಯ ಲಂಡನ್ ಮೂಲದ ವ್ಯಕ್ತಿಯ ಡ್ಯಾನ್ಸ್ ಸಮಾಜಿಕ ತಾಣದಲ್ಲಿ ಭಾರೀ ಸದ್ದು ಮಾಡ್ತಾ ಇದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...