alex Certify
ಕನ್ನಡ ದುನಿಯಾ       Mobile App
       

Kannada Duniya

ತನ್ನ ಮದುವೆ ಡ್ರೆಸ್ ಮಾರಾಟಕ್ಕಿಟ್ಟಿದ್ದಾಳೆ ಈ ಮಹಿಳೆ

wedding_b-200816 (1)

ಮದುವೆಯಲ್ಲಿ ಧರಿಸಿದ ಡ್ರೆಸ್ ವಿಶೇಷವಾಗಿರುತ್ತದೆ. ಭಾರಿ ಬೆಲೆಯ ಬಟ್ಟೆಗಳನ್ನು ಎಲ್ಲರೂ ಜೋಪಾನವಾಗಿಡ್ತಾರೆ. ಆದ್ರೆ ಬ್ರಿಟನ್ ನಲ್ಲಿ ಇದಕ್ಕೆ ಸಂಬಂಧಿಸಿದಂತೆ ಒಂದು ವಿಚಿತ್ರ ಸುದ್ದಿ ಹೊರಬಿದ್ದಿದೆ. ಮದುವೆ ಉಡುಗೆಯನ್ನು ಮಹಿಳೆ ಇಬೇ ಆನ್ಲೈನ್ ವೆಬ್ ಸೈಟ್ ನಲ್ಲಿ ಮಾರಾಟಕ್ಕಿಟ್ಟಿದ್ದಾಳೆ. ಇದರ ಹಿಂದಿನ ಕಾರಣವನ್ನೂ ಮಹಿಳೆ ಹೇಳಿದ್ದಾಳೆ.

ಬ್ರಿಟನ್ ಚೆಸ್ಟರ್ ಫೀಲ್ಡ್ ನ ಸಮಂತಾ, ಮದುವೆ ಉಡುಗೆಯನ್ನು ಮಾರಾಟ ಮಾಡ್ತಿದ್ದಾಳೆ. ಇಬೇ ನಲ್ಲಿ ಮಾರಾಟ ಮಾಡಲು ಮುಂದಾಗಿದ್ದಾಳೆ. 2 ಸಾವಿರ ಪೌಂಡ್ ಬೆಲೆಯ ಈ ಉಡುಗೆಯನ್ನು 12ಕ್ಕೂ ಹೆಚ್ಚು ಮಂದಿ ಖರೀದಿಸಲು ಮುಂದೆ ಬಂದಿದ್ದಾರೆ. 500 ಬ್ರಿಟನ್ ಪೌಂಡ್ ನಿಂದ ಇದರ ಮಾರಾಟ ಶುರುವಾಗಿದೆ. ಸಮಂತಾ ಪತಿಯಿಂದ ವಿಚ್ಛೇದನ ಪಡೆಯುತ್ತಿದ್ದಾಳಂತೆ. 2014ರಲ್ಲಿ ಮದುವೆ ಸಮಯದಲ್ಲಿ ಸಮಂತಾ ಈ ಉಡುಗೆ ಧರಿಸಿದ್ದಳಂತೆ. ಆದ್ರೆ ಆಕೆಯ ಪತಿ ಮೋಸ ಮಾಡಿದ್ದಾನಂತೆ. ಬೇರೆಯವಳ ಜೊತೆ ವಾಸವಾಗಿದ್ದಾನಂತೆ. ಪತಿಯಿಂದ ವಿಚ್ಛೇದನ ಪಡೆಯಲು ಮುಂದಾಗಿದ್ದಾಳೆ. ಉಡುಗೆ ಮಾರಾಟ ಮಾಡಿದ ಹಣದಲ್ಲಿ ವಿಚ್ಛೇದನಕ್ಕೆ ತಗಲುವ ಖರ್ಚನ್ನು ನಿಭಾಯಿಸುವ ನಿರ್ಧಾರಕ್ಕೆ ಬಂದಿದ್ದಾಳೆ.

ಸಮಂತಾ ಡ್ರೆಸ್ ಜೊತೆ ಒಂದು ಫೋಸ್ಟ್ ಕೂಡ ಮಾಡಿದ್ದಾಳೆ. ಬಟ್ಟೆ ಸ್ವಲ್ಪ ಕೊಳಕಾಗಿದೆ. ಡ್ರೈಕ್ಲೀನಿಂಗ್ ಮಾಡಿದ್ರೆ ಎಲ್ಲವೂ ತೊಳೆದು ಹೋಗುತ್ತೆ. ಕೆಟ್ಟ ಅನುಭವ ಹೊಂದಿರುವ ಈ ಉಡುಗೆಯನ್ನು ಖರೀದಿಸುವವರು ಮುಂದೆ ಬರಬಹುದು. ಒಂದು ವೇಳೆ ನಿಮ್ಮ ಜೀವನದಲ್ಲಿ ಈ ಉಡುಗೆ ಖುಷಿ ನೀಡದಿದ್ದಲ್ಲಿ ನೀವೂ ಕೂಡ ಇದನ್ನು ಮಾರಾಟ ಮಾಡಬಹುದು ಎಂದಿದ್ದಾಳೆ ಸಮಂತಾ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...