alex Certify
ಕನ್ನಡ ದುನಿಯಾ       Mobile App
       

Kannada Duniya

ಪ್ರತಿಭಟನಾನಿರತ ಮಹಿಳೆಯನ್ನು ಸಂತೈಸಿದ ಪೊಲೀಸ್…!

ಯುರೋಪಿನ ಅನೇಕ ದೇಶಗಳಲ್ಲಿ ಬುರ್ಕಾ ಮೇಲೆ ನಿಷೇಧ ಹೇರಲಾಗಿದೆ. ಸಾರ್ವಜನಿಕ ಪ್ರದೇಶಗಳಲ್ಲಿ ಬುರ್ಕಾ ಧರಿಸಿ ಹೋಗುವಂತಿಲ್ಲ. ಡೆನ್ಮಾರ್ಕ್ ನಲ್ಲಿ ಕೂಡ ಆಗಸ್ಟ್ 1ರಿಂದ ಬುರ್ಕಾ ಮೇಲೆ ನಿಷೇಧ ಹೇರಲಾಗಿದೆ. ಎರಡು ದಿನಗಳ ಹಿಂದೆ ಬುರ್ಕಾ ಧರಿಸಿ ಮಾಲ್ ಗೆ ಬಂದಿದ್ದ ಮಹಿಳೆಗೆ 10 ಸಾವಿರ ರೂಪಾಯಿ ದಂಡ ವಿಧಿಸಿದ ಸುದ್ದಿ ವರದಿಯಾಗಿತ್ತು. ಈಗ ಮತ್ತೊಂದು ಫೋಟೋ ವೈರಲ್ ಆಗಿದೆ.

ಫೋಟೋದಲ್ಲಿ ಬುರ್ಕಾ ಧರಿಸಿದ ಮಹಿಳೆಯನ್ನು ಮಹಿಳಾ ಪೊಲೀಸರೊಬ್ಬರು ತಬ್ಬಿಕೊಂಡು ಸಮಾಧಾನಪಡಿಸಿದ್ದಾರೆ. ದೇಶದಲ್ಲಿ ಬುರ್ಕಾ ಮೇಲೆ ಹೇರಿರುವ ನಿಷೇಧದ ವಿರುದ್ಧ ಪ್ರತಿಭಟನೆಗಳು ಕೇಳಿ ಬರ್ತಿವೆ. ಅನೇಕ ಕಡೆ ಸಾರ್ವಜನಿಕರು ಪ್ರತಿಭಟನೆ ನಡೆಸುತ್ತಿದ್ದಾರೆ.

ಈ ವೇಳೆ ಬುರ್ಕಾ ಧರಿಸಿದ್ದ ಮಹಿಳೆಯನ್ನು ಮಹಿಳಾ ಪೊಲೀಸ್ ತಬ್ಬಿಕೊಂಡು ಸಂತೈಸಿರುವ ಫೋಟೋವನ್ನು ರಾಯಟರ್ಸ್ ಛಾಯಾಗ್ರಾಹಕ ಆಂಡ್ರ್ಯೂ ಕೆಲಿ ಕ್ಲಿಕ್ಕಿಸಿದ್ದಾರೆ. ಈ ಫೋಟೋ ವಿಶ್ವದಾದ್ಯಂತ ಸುದ್ದಿ ಮಾಡ್ತಿದೆ. ಸಾರ್ವಜನಿಕ ಪ್ರದೇಶದಲ್ಲಿ ಬುರ್ಕಾ ಧರಿಸಿದ್ರೆ ದಂಡ ವಿಧಿಸಲು ನಿರ್ಧರಿಸಲಾಗಿದೆ. ಒಂದು ಸಾವಿರ ಕ್ರೋನರ್ ವರೆಗೆ ದಂಡ ವಿಧಿಸಲು ಸರ್ಕಾರ ಆದೇಶ ನೀಡಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...