alex Certify
ಕನ್ನಡ ದುನಿಯಾ       Mobile App
       

Kannada Duniya

ಚೀನಾ ಮಕ್ಕಳ ಪಾಲಿಗೆ ಆಪತ್ಪಾಂಧವನಾದ ಈತ

ಕೆಲವೊಮ್ಮೆ ಕೆಲ ವ್ಯಕ್ತಿಗಳ ಆತ್ಮೀಯತೆ, ಅವರ ಮಾನವೀಯತೆ ಗುಣಗಳನ್ನ ನೋಡಿದಾಗ ಮನಸ್ಸಿಗೆ ಸಂತೋಷವಾಗುತ್ತದೆ. ಅಂತಹಾ ಒಂದು ಸುಂದರವಾದ ಆತ್ಮೀಯತೆಯ ಕ್ಷಣವನ್ನು ಚೀನಾದಲ್ಲಿ ಸೆರೆ ಹಿಡಿಯಲಾಗಿದೆ.

ಪ್ರವಾಹದಿಂದ ರಸ್ತೆಗಳೆಲ್ಲಾ ಜಲಾವೃತವಾಗಿದ್ದವು. ಹೀಗಾಗಿ ಚಿಕ್ಕ ಚಿಕ್ಕ ಮಕ್ಕಳು ರಸ್ತೆ ದಾಟಲು ಕಷ್ಟ ಪಡುತ್ತಿದ್ದವು. ಇದನ್ನರಿತ ಡೆಲವರಿ ಬಾಯ್ ತನ್ನ ಆಟೋವನ್ನೇ ಬ್ರಿಡ್ಜ್ ಆಗಿ ಮಾರ್ಪಡಿಸಿದ. ನಂತರ ಒಂದು ಬದಿಯಲ್ಲಿ ನಿಂತಿದ್ದ ಮಕ್ಕಳ ಬಳಿ ತನ್ನ ಆಟೋ ನಿಲ್ಲಿಸಿ ಅದರ ಒಳಗಿನಿಂದ ಮಕ್ಕಳನ್ನು ಇನ್ನೊಂದು ಬದಿಗೆ ಕರೆತಂದ. ಇದ್ರಿಂದಾಗಿ ಮಕ್ಕಳು ನೀರಿನಲ್ಲಿ ಹೆಜ್ಜೆ ಹಾಕದೆ ಇನ್ನೊಂದು ಬದಿಗೆ ಬಂದು ಸೇರಿದ್ರು.

ಈ ಘಟನೆ ಚೀನಾದ ಗುವಾಂಗ್ಕ್ಸಿಝವಾಂಗ್ ಪ್ರದೇಶದಲ್ಲಿ ನಡೆದಿದೆ. ಸದ್ಯ ಈ ವಿಡಿಯೋ ಈಗ ವೈರಲ್ ಆಗಿದೆ. ಇಂತಹ ಸೂಪರ್ ಹೀರೋಗಳ ಉದಾಹರಣೆಗಳು ಸಾಕಷ್ಟಿವೆ. ಕಳೆದ ಜನವರಿಯಲ್ಲಿ ಅಪಘಾತದಿಂದ ಬಸ್ ನದಿಯೊಳಗೆ ಬಿದ್ದಿತ್ತು. ಅದ್ರಲ್ಲಿದ್ದ ಪ್ರಯಾಣಿಕರನ್ನು ಒಬ್ಬ ಕ್ರೇನ್ ಚಾಲಕ ಬದುಕಿಸಿದ್ದ. ಹಾಗೆಯೇ ಹೆಪ್ಪುಗಟ್ಟಿದ ಸರೋವರದಲ್ಲಿ ಸಿಲುಕಿದ್ದ ಮಗುವನ್ನು ಪೊಲೀಸ್ ಅಧಿಕಾರಿಯೊಬ್ಬ ತನ್ನ ಜೀವದ ಹಂಗು ತೊರೆದು ಬದುಕಿಸಿದ್ದನ್ನು ಇಲ್ಲಿ ನೆನಪಿಸಿಕೊಳ್ಳಬಹುದು.

Subscribe Newsletter

Get latest updates on your inbox...

Opinion Poll

  • ಅತಂತ್ರ ವಿಧಾನಸಭೆ ಸೃಷ್ಟಿಯಾದ ಬಳಿಕ ರಾಜ್ಯದಲ್ಲಿ ಆರಂಭವಾಗಿದೆಯಾ ಶಾಸಕರ ಕುದುರೆ ವ್ಯಾಪಾರ?

    View Results

    Loading ... Loading ...