alex Certify
ಕನ್ನಡ ದುನಿಯಾ       Mobile App
       

Kannada Duniya

ವೃದ್ದೆ ಪಾಲಿಗೆ ದೇವರಾದ್ರು ದೆಹಲಿ ಮೂಲದ ವೈದ್ಯ ದಂಪತಿ

ವಿಮಾನದಲ್ಲಿ ಪ್ರಯಾಣಿಸುತ್ತಿದ್ದ 78 ವರ್ಷದ ವೃದ್ಧೆಯೊಬ್ಬರು ತಿಂದ ಕ್ಯಾಂಡಿ, ಆಕಸ್ಮಿಕವಾಗಿ ಶ್ವಾಸಕೋಶದಲ್ಲಿ ಸಿಕ್ಕಿಹಾಕಿಕೊಂಡ ಪರಿಣಾಮ ಆಕೆ ಸಾವು-ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದ ವೇಳೆ ಇದೇ ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ದೆಹಲಿ ಮೂಲದ ವೈದ್ಯ ದಂಪತಿ ಸಕಾಲಕ್ಕೆ ಚಿಕಿತ್ಸೆ ನೀಡಿ ಅಪಾಯದಿಂದ ಪಾರು ಮಾಡಿದ್ದಾರೆ.

ದೆಹಲಿಯಿಂದ ಲಂಡನ್ ಗೆ ತೆರಳುತ್ತಿದ್ದ ವಿಮಾನದಲ್ಲಿ ಈ ಘಟನೆ ನಡೆದಿದ್ದು, ವೃದ್ದೆಯ ಶ್ವಾಸಕೋಶದಲ್ಲಿ ಕ್ಯಾಂಡಿ ಸಿಕ್ಕಿಹಾಕಿಕೊಂಡ ಪರಿಣಾಮ ಉಸಿರಾಡಲು ತೊಂದರೆಯಾಗಿ ಆಕೆ ಒದ್ದಾಡತೊಡಗಿದರು.

ವಿಮಾನ ಸಿಬ್ಬಂದಿ ವೈದ್ಯರ ನೆರವು ಯಾಚಿಸಿದ್ದು, ಕೂಡಲೇ ಬಂದ ವೈದ್ಯ ದಂಪತಿ, ಕೃತಕ ಉಸಿರಾಟದ ವ್ಯವಸ್ಥೆ ಮಾಡಿದರಲ್ಲದೆ ತಕ್ಷಣದ ಚಿಕಿತ್ಸೆ ಅಗತ್ಯವಿರುವುದರಿಂದ ಆಸ್ಪತ್ರೆಗೆ ಸೇರಿಸುವುದು ಸೂಕ್ತ ಎಂದರು. ವಿಮಾನದ ಪೈಲೆಟ್, ಬುಡಾಪೆಸ್ಟ್ ನಲ್ಲಿ ಲ್ಯಾಂಡ್ ಮಾಡಿದ್ದು, ವೃದ್ಧೆಯನ್ನು ಆಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ನೀಡಲಾಗಿದೆ. ಇದರಿಂದ ಆಕೆ ಅಪಾಯದಿಂದ ಪಾರಾಗಿದ್ದು, ವಿಮಾನದಲ್ಲಿ ಸಕಾಲಕ್ಕೆ ಚಿಕಿತ್ಸೆ ಸಿಗದಿದ್ದರೆ ಪ್ರಾಣಕ್ಕೆ ಅಪಾಯವಾಗುತ್ತಿತ್ತು ಎಂದು ಬುಡಾಪೆಸ್ಟ್ ಆಸ್ಪತ್ರೆ ವೈದ್ಯರು ತಿಳಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...