alex Certify
ಕನ್ನಡ ದುನಿಯಾ       Mobile App
       

Kannada Duniya

ಆಸ್ಟ್ರೇಲಿಯಾದ ಬೀಚ್ ನಲ್ಲಿ ದೆಹಲಿ ವಿದ್ಯಾರ್ಥಿನಿಯ ದುರಂತ ಸಾವು

ದೆಹಲಿಯ ವಿದ್ಯಾರ್ಥಿನಿಯೊಬ್ಬಳು ಸೆಲ್ಫಿ ತೆಗೆದುಕೊಳ್ಳಲು ಹೋಗಿ ಆಸ್ಟ್ರೇಲಿಯಾದ ಅಡಿಲೇಡ್ ನಲ್ಲಿ ನೀರು ಪಾಲಾಗಿದ್ದಾಳೆ. ನಾಲ್ವರನ್ನು ರಕ್ಷಣೆ ಮಾಡಲಾಗಿದೆ. ಇವರೆಲ್ಲ ರಾಜಕೀಯ ಸರ್ವೋದಯ ಕನ್ಯ ವಿದ್ಯಾಲಯದ 11ನೇ ತರಗತಿ ವಿದ್ಯಾರ್ಥಿನಿಯರು. ಪೆಸಿಪಿಕ್ ಸ್ಕೂಲ್ ಗೇಮ್ಸ್ ಗಾಗಿ ಆಸ್ಟ್ರೇಲಿಯಾಕ್ಕೆ ತೆರಳಿದ್ದರು.

ನೀರಿನಲ್ಲಿ ಕೊಚ್ಚಿ ಹೋದ ಬಾಲಕಿ ನಿತೀಶಾ ಅತ್ಯಂತ ಬುದ್ಧಿವಂತ ವಿದ್ಯಾರ್ಥಿನಿ. ಓದಿನಲ್ಲಿ ಮಾತ್ರವಲ್ಲ, ಫುಟ್ಬಾಲ್ ನಲ್ಲೂ ಮುಂದಿದ್ದಳು. ಹತ್ತಾರು ಸ್ಪರ್ಧೆಗಳಲ್ಲಿ ಗೆಲುವು ಸಾಧಿಸಿದ್ಲು. ನವೆಂಬರ್ 30ರಂದು ಫುಟ್ಬಾಲ್ ಟೂರ್ನಿಗಾಗಿ ದೆಹಲಿಯಿಂದ ಆಸ್ಟ್ರೇಲಿಯಾಕ್ಕೆ ಬಂದಿದ್ದಾಳೆ.

ಶನಿವಾರ ತಂದೆಗೆ ಕರೆ ಮಾಡಿದ್ದ ನಿತೀಶಾ, ಪಂದ್ಯಗಳೆಲ್ಲ ಮುಗಿದಿದ್ದು ವಾಪಸ್ ದೆಹಲಿಗೆ ಬರಲು ತಯಾರಿ ನಡೆಸುತ್ತಿರುವುದಾಗಿ ತಿಳಿಸಿದ್ಲು. ಅದಾಗಿ ಸ್ವಲ್ಪ ಹೊತ್ತಿನಲ್ಲೇ ಅವಳ ಸಾವಿನ ಸುದ್ದಿ ಬರಸಿಡಿಲಿನಂತೆ ಬಂದೆರಗಿದೆ. ವಿದ್ಯಾರ್ಥಿನಿಯರೆಲ್ಲ ಒಟ್ಟಾಗಿ ಬೀಚ್ ಗೆ ಬಂದಿದ್ರು.

ಆಡುತ್ತ ಆಡುತ್ತ ಆಳ ಸಮುದ್ರಕ್ಕೆ ಇಳಿದುಬಿಟ್ಟಿದ್ದಾರೆ. ಈ ವೇಳೆ ಎಲ್ಲರೂ ಸೇರಿ ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಮುಂದಾಗಿದ್ದಾರೆ. ಭಾರೀ ಅಲೆಯೊಂದು ದಿಢೀರನೆ ಬಂದು ಅಪ್ಪಳಿಸಿದ್ರಿಂದ ಎಲ್ರೂ ಕೊಚ್ಚಿಕೊಂಡು ಹೋಗಿದ್ರು. ನಾಲ್ವರನ್ನು ರಕ್ಷಣೆ ಮಾಡಲಾಗಿದ್ದು, ನಿತೀಶಾ ದುರಂತ ಸಾವಿಗೀಡಾಗಿದ್ದಾಳೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...