alex Certify
ಕನ್ನಡ ದುನಿಯಾ       Mobile App
       

Kannada Duniya

ಎರಡು ವರ್ಷಗಳ ಹಿಂದೆ ಸಾವನ್ನಪ್ಪಿದ್ದಳು ಪತ್ನಿ..ಆದ್ರೆ ಟಿವಿ ಶೋನಲ್ಲಿ ಪ್ರತ್ಯಕ್ಷ..!

azilal

ಎರಡು ವರ್ಷಗಳ ಹಿಂದೆ  ಹೆಂಡತಿ ಸತ್ತಿದ್ದಾಳೆ. ಆತನೇ ದಫನ್ ಮಾಡಿದ್ದಾನೆ. ಆದ್ರೆ ಅಚಾನಕ್ ಹೆಂಡತಿ ಟಿವಿ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡ್ರೆ ಏನಾಗಬೇಡ?

ಮೊರಾಕೊದ ಅಝಿಲಾನ್ ನಲ್ಲಿ ಅಬರಾಗ್ ಮೊಹಮ್ಮದ್ ತನ್ನ ಪತ್ನಿ ಜೊತೆ ಎರಡು ವರ್ಷಗಳ ಹಿಂದೆ ಪ್ರಯಾಣ ಮಾಡ್ತಾ ಇದ್ದ. ಈ ವೇಳೆ ಕಾರ್ ಅಪಘಾತವಾಗಿದೆ. ತಕ್ಷಣ ಮಡದಿಯನ್ನು ಮೊಹಮ್ಮದ್ ಆಸ್ಪತ್ರೆಗೆ ದಾಖಲಿಸಿದ್ದಾನೆ. ಆಸ್ಪತ್ರೆಯಲ್ಲಿ ಹಣ ತರುವಂತೆ ಹೇಳಿದ್ದಾರೆ. ಹಾಗಾಗಿ ಮೊಹಮ್ಮದ್ ಹೆಂಡತಿಯನ್ನು ಆಸ್ಪತ್ರೆಯಲ್ಲಿ ಬಿಟ್ಟು ಊರಿಗೆ ಹೋಗಿದ್ದಾನೆ. ನಾಲ್ಕು ಗಂಟೆ ನಂತ್ರ ಹಣದ ಜೊತೆ ವಾಪಸ್ ಬಂದಿದ್ದಾನೆ.

ಆದ್ರೆ ಆಸ್ಪತ್ರೆಯಲ್ಲಿ ಮೊಹಮ್ಮದ್ ಹೆಂಡತಿ ಸಾವನ್ನಪ್ಪಿದ್ದಾಳೆಂದು ತಿಳಿಸಿದ್ದಾರೆ. ಹಾಗೇ ಶವದ ಪೆಟ್ಟಿಗೆ ನೀಡಿದ್ದಾರೆ. ನೋವಿನಲ್ಲಿ ಮೊಹಮ್ಮದ್ ದಫನ್ ಮಾಡಿದ್ದಾನೆ. ಆದ್ರೆ ಎರಡು ವರ್ಷಗಳ ನಂತ್ರ ಮೊಹಮ್ಮದ್ ಸ್ನೇಹಿತರು ಆತನ ಹೆಂಡತಿ ಟಿವಿಯಲ್ಲಿ ಕಾಣಿಸಿಕೊಂಡಿದ್ದಾಳೆಂದು ಹೇಳಿದ್ದಾರೆ.

ಕುಟುಂಬದಿಂದ ಬೇರೆಯಾದವರನ್ನು ಕುಟುಂಬಕ್ಕೆ ಸೇರಿಸುವ ಕಾರ್ಯಕ್ರಮ ಅದು. ಅಲ್ಲಿ ಕಾಣಿಸಿಕೊಂಡಿದ್ದ ಪತ್ನಿ ತನ್ನ ಹಾಗೂ ಗಂಡನ ಹೆಸರು ಹೇಳಿದ್ದಾಳೆ. ಹಾಗೆ ಗಂಡನನ್ನು ಹುಡುಕಿಕೊಡುವಂತೆ ಹೇಳಿದ್ದಾಳೆ. ಆದ್ರೆ ಈವರೆಗೂ ಆಸ್ಪತ್ರೆಯಲ್ಲಿ ಏನಾಯ್ತು ಎನ್ನುವ ಬಗ್ಗೆ ಮಾಹಿತಿ ಸಿಕ್ಕಿಲ್ಲ. ತನ್ನ ಪತ್ನಿ ಎಂದುಕೊಂಡು ಬೇರೆ ಮಹಿಳೆಯ ಶವ ಪಡೆದಿದ್ದಾನೆ ಮೊಹಮ್ಮದ್.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...