alex Certify
ಕನ್ನಡ ದುನಿಯಾ       Mobile App
       

Kannada Duniya

ಇಂಡೋನೇಷ್ಯಾದಲ್ಲಿ ಮತ್ತೆ ಮುಳುಗಿದ ಹಡಗು

ಇಂಡೋನೇಷ್ಯಾದಲ್ಲಿ ಹಡಗು ಮುಳುಗಿ 24ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ. 41 ಮಂದಿ ಕಾಣೆಯಾಗಿದ್ದಾರೆಂದು ಮೂಲಗಳು ತಿಳಿಸಿವೆ. ಹಡಗಿನಲ್ಲಿ 131 ಮಂದಿ ಪ್ರಯಾಣ ಬೆಳೆಸಿದ್ದರು. 74 ಮಂದಿಯನ್ನು ರಕ್ಷಣೆ ಮಾಡಲಾಗಿದೆ.

ಕಳೆದ ಎರಡು ವಾರಗಳಲ್ಲಿ ಇದು ಎರಡನೇ ದುರ್ಘಟನೆಯಾಗಿದೆ. ಜೂನ್ 18 ರಂದು ಸುಮಾತ್ರಾದಲ್ಲಿ ಹಡಗೊಂದು ಮುಳುಗಿತ್ತು. ಘಟನೆಯಲ್ಲಿ 161 ಮಂದಿ ನಾಪತ್ತೆಯಾಗಿದ್ದರು. ಸರ್ಕಾರ ರಕ್ಷಣಾ ಕಾರ್ಯಾಚರಣೆಯನ್ನು ನಿಲ್ಲಿಸಿದೆ. ಇಂದು ಮತ್ತೊಂದು ದುರ್ಘಟನೆ ನಡೆದಿದೆ.

ಕೆಎಂ ಲೆಸ್ಟಾರಿ ಹೆಸರಿನ ಹಡಗು ಮುಳುಗಿದೆ. ಸುಲಾವಾಸಿ ದ್ವೀಪದ ಹತ್ತಿರವೇ ಹಡಗು ಮುಳುಗಿದೆ. ದ್ವೀಪದಿಂದ 300 ಕಿಲೋ ಮೀಟರ್ ದೂರದಲ್ಲಿ ಘಟನೆ ನಡೆದಿದೆ. ಕೆಲ ಪ್ರಯಾಣಿಕರು ಸಮುದ್ರದಲ್ಲಿ ಈಜುತ್ತ ನೆರವಿಗಾಗಿ ಕಾಯುತ್ತಿದ್ದರು. ಮಳೆ ಹಾಗೂ ಗಾಳಿ ಮಧ್ಯೆಯೂ ಕೆಲವರು ಹಡಗನ್ನು ಗಟ್ಟಿಯಾಗಿ ಹಿಡಿದುಕೊಂಡಿದ್ದರಂತೆ. ರಕ್ಷಣಾ ಕಾರ್ಯ ಮುಂದುವರೆದಿದ್ದು, ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆಯಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...