alex Certify
ಕನ್ನಡ ದುನಿಯಾ       Mobile App
       

Kannada Duniya

650 ಅಡಿ ಉದ್ದದ ಸೇತುವೆ ಕುಸಿದು 38 ಮಂದಿ ಸಾವು

ಇಟಲಿ ಜಿನೋವಾದಲ್ಲಿ ಸೇತುವೆ ಕುಸಿದು ಸಾವನ್ನಪ್ಪಿದವರ ಸಂಖ್ಯೆ 38ಕ್ಕೇರಿದೆ. ಇಟಲಿ ಗೃಹ ಸಚಿವರು ಈ ಬಗ್ಗೆ ಅಧಿಕೃತ ಹೇಳಿಕೆ ನೀಡಿದ್ದಾರೆ. ಮಂಗಳವಾರ 650 ಅಡಿ ಉದ್ದದ ಉತ್ತರ ಫೋರ್ಡ್ ಮೋರಂಡಿ ಮೋಟರ್ವೇ ಸೇತುವೆ ಕುಸಿದು ಬಿದ್ದಿದೆ. ಘಟನೆಯಲ್ಲಿ 30ಕ್ಕೂ ಹೆಚ್ಚು ಕಾರು, ಟ್ರಕ್ ಸೇರಿ ಅನೇಕ ವಾಹನಗಳು ಕೆಳಗೆ ಬಿದ್ದಿವೆ. ಇದ್ರಲ್ಲಿ ಅನೇಕರು ಸಾವನ್ನಪ್ಪಿದ್ದಾರೆ.

ಇಟಲಿ ಸಾರಿಗೆ ಸಚಿವರು ಇದನ್ನು ದೊಡ್ಡ ಅಪಘಾತವೆಂದಿದ್ದಾರೆ. ಸೇತುವೆ ಕುಸಿತಕ್ಕೆ ಕಾರಣ ತಿಳಿದುಬಂದಿಲ್ಲ. ಸೇತುವೆ ನಿರ್ಮಾಣದಲ್ಲಿ ನಡೆದ ಕೆಲ ನ್ಯೂನ್ಯತೆಯೇ ಇದಕ್ಕೆ ಕಾರಣ ಎನ್ನಲಾಗ್ತಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಯುತ್ತಿದೆ. ಸೇತುವೆ ನಿರ್ಮಾಣ ಮಾಡಿದ ಕಂಪನಿ ವಿರುದ್ಧವೂ ತನಿಖೆ ನಡೆಯುತ್ತಿದೆ.

ಘಟನೆ ನಂತ್ರ ರಕ್ಷಣಾ ಕಾರ್ಯ ನಡೆಯುತ್ತಿದೆ. ರಾತ್ರಿಯಿಡಿ ರಕ್ಷಣಾ ಕಾರ್ಯ ನಡೆದಿದೆ. ರಕ್ಷಣಾ ಪಡೆ ಈಗ್ಲೂ ಸ್ಥಳದಲ್ಲಿದ್ದು, ಅವಶೇಷಗಳನ್ನು ತೆಗೆಯುವ ಕೆಲಸ ಮಾಡ್ತಿದೆ. ಸಾವಿನ ಸಂಖ್ಯೆ ಇನ್ನಷ್ಟು ಹೆಚ್ಚಾಗುವ ಸಾಧ್ಯತೆಯಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...