alex Certify
ಕನ್ನಡ ದುನಿಯಾ       Mobile App
       

Kannada Duniya

ಪ್ರೇಯಸಿ ಚುಂಬಿಸಿದ್ದಕ್ಕೆ ಸತ್ತೇ ಹೋದ ಪ್ರಿಯಕರ

ಮುತ್ತು ಮತ್ತು ಬರಿಸುತ್ತೆ ಅನ್ನೋ ಮಾತಿದೆ. ಆದ್ರೆ ಮತ್ತು ಭರಿತ ಮುತ್ತು ವ್ಯಕ್ತಿಯೊಬ್ಬನ ಪ್ರಾಣವನ್ನೇ ತೆಗೆದಿದೆ. ಒರೆಗಾನ್ ನಲ್ಲಿ ಮಹಿಳೆಯೊಬ್ಳು ಡ್ರಗ್ಸ್ ಸೇವಿಸಿ ತನ್ನ ಪ್ರಿಯಕರನಿಗೆ ಚುಂಬಿಸಿದ್ದರಿಂದ ಆತ ಮೃತಪಟ್ಟಿದ್ದಾನೆ. ಅಮೆರಿಕದ ಕೋರ್ಟ್ ಆ ಮಹಿಳೆಗೆ 2 ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ.

ಮೆಲಿಸ್ಸಾ ಅನ್ ಬ್ಲೇರ್ ಎಂಬ ಮಹಿಳೆ ತನ್ನ ಬಾಯ್ ಫ್ರೆಂಡ್ ಆ್ಯಂಥೋನಿ ಪೊವೆಲ್ ಜೊತೆಗೆ ರೊಮ್ಯಾನ್ಸ್ ಮಾಡುತ್ತಿದ್ಲು. ಮೆಥ್ ತುಂಬಿದ್ದ ಬಲೂನ್ ಅನ್ನು ತನ್ನ ಬಾಯಲ್ಲಿ ತುಂಬಿಕೊಂಡು ಆ್ಯಂಥೋನಿಗೆ ಚುಂಬಿಸಿದ್ದಾಳೆ.

ಮೀಥಾಂಫೆಟಮೈನ್ ತುಂಬಿದ್ದ 7 ಬಲೂನ್ ಗಳ ಪೈಕಿ, ಎರಡು ಆತನ ಹೊಟ್ಟೆಯಲ್ಲೇ ಸ್ಫೋಟಿಸಿದೆ. ಆತ ಮೃತಪಟ್ಟಿದ್ದಾನೆ. ಆ್ಯಂಥೋನಿ ಕೂಡ ಸಾಚಾ ವ್ಯಕ್ತಿಯಾಗಿರಲಿಲ್ಲ. ಕೊಲೆ ಪ್ರಕರಣ ಅವನ ಮೇಲಿತ್ತು.

ತನ್ನ ಅತ್ತೆಗೆ ಚಾಕುವಿನಿಂದ ಇರಿದು ಆತ ಹತ್ಯೆ ಮಾಡಿದ್ದ. ಅವನಿಗೆ ಜೀವಾವಧಿ ಜೈಲು ಶಿಕ್ಷೆಯಾಗಿತ್ತು. ಗೆಳೆಯನನ್ನು ಭೇಟಿಯಾಗಲು ಜೈಲಿಗೇ ತೆರಳಿದ್ದ ಮೆಲಿಸ್ಸಾ, ಜೊತೆಗೆ ಡ್ರಗ್ಸ್ ಕೊಂಡೊಯ್ದಿದ್ದಳು.

Subscribe Newsletter

Get latest updates on your inbox...

Opinion Poll

  • ರಿಯಲ್ ಸ್ಟಾರ್ ಉಪೇಂದ್ರರ ಕರ್ನಾಟಕ ಪ್ರಜ್ಞಾವಂತ ಜನತಾ ಪಾರ್ಟಿಗೆ ಜನ ಬೆಂಬಲ ಸಿಗಲಿದೆಯೇ..?

    View Results

    Loading ... Loading ...