alex Certify
ಕನ್ನಡ ದುನಿಯಾ       Mobile App
       

Kannada Duniya

ಹೆಸರಿನ ಕಾರಣಕ್ಕಾಗಿ ನಟನಿಗೆ ಹರಿದು ಬರುತ್ತಿದೆ ಶುಭಾಶಯಗಳ ಮಹಾಪೂರ

ಬಾಲಿವುಡ್ ನಟ ಇಮ್ರಾನ್ ಖಾನ್ ಬಹುದಿನಗಳಿಂದ ಬೆಳ್ಳಿ ತೆರೆಯಲ್ಲಿ ಕಾಣಿಸಿಕೊಂಡಿಲ್ಲ. ಆದ್ರೂ ಸಹ ಇವರಿಗೆ ಶುಭಾಶಯ ಸಂದೇಶಗಳು ಹರಿದು ಬರುತ್ತಿವೆ. ಅಷ್ಟಾಗ್ಯೂ ಈ ವಿಶ್ ಗಳು ಯಾವುದೋ ಚಿತ್ರದ ಗೆಲುವಿಗಾಗಲಿ, ಇಲ್ಲಾ ಅವಾರ್ಡ್ ಪಡೆದಿರುವುದಕ್ಕಾಗಿ ಅಲ್ಲವೇ ಅಲ್ಲ. ಬದಲಿಗೆ ಇಮ್ರಾನ್ ಖಾನ್ ಗೆ ಪ್ರಧಾನಿ ಆಗುತ್ತಿರುವ ಕುರಿತು ಶುಭಾಶಯಗಳು ಸಾಲುಸಾಲಾಗಿ ಬರುತ್ತಿವೆ.

ಇಮ್ರಾನ್ ಖಾನ್ ಉತ್ತಮ ರಾಜಕಾರಣಿ ಹಾಗೂ ಒಳ್ಳೆಯ ನಾಯಕ ಎಂದು ಅಭಿಮಾನಿಗಳು ಪ್ರಧಾನಿಗೆ ಶುಭಾಶಯ ತಿಳಿಸುತ್ತಿದ್ದಾರೆ. ಇದನ್ನೆಲ್ಲಾ ಓದಿ ನೀವು ಗೊಂದಲಕ್ಕೊಳಗಾಗಬೇಡಿ. ಈ ಸಂದೇಶಗಳು, ಹೆಸರಿನ ಕಾರಣಕ್ಕಾಗಿ ನಟನಿಗೆ ಬರುತ್ತಿವೆ. ಅಸಲಿಗೆ ಇಬ್ಬರ ಹೆಸರುಗಳು ಒಂದೇ ಆಗಿದ್ದರಿಂದ ಈ ಗೊಂದಲ ಸೃಷ್ಟಿಯಾಗಿದೆ.

ಈ ಸಂದೇಶಗಳನ್ನು ಓದಿ ಇಮ್ರಾನ್ ಖಾನ್ ಖುಷಿ ಪಡ್ತಾ ಇದ್ದಾರೆ. ಇಮ್ರಾನ್ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಈ ಬಗ್ಗೆ ತಮ್ಮ ಅನಿಸಿಕೆ ಹಂಚಿಕೊಂಡಿದ್ದಾರೆ. ಇಮ್ರಾನ್, ಅಭಿಮಾನಿಯೊಬ್ಬ ಕಳುಹಿಸಿರುವ ಸಂದೇಶವನ್ನು ಸ್ಕ್ರೀನ್ ಶಾಟ್ ತೆಗೆದು ಹಾಕಿದ್ದಾರೆ. ಈ ಫೋಟೋದ ಅಡಿ ಇಮ್ರಾನ್, ಇನ್ನು ಹೆಚ್ಚು ಹೊತ್ತು ಕಾಯುವ ಅವಶ್ಯಕತೆ ಇಲ್ಲ. ಈ ವಾರದಿಂದಲೇ ಹೊಸ ಯೋಜನೆಗಳನ್ನು ಜಾರಿಗೆ ತರಲಿದ್ದು, ನಿಮ್ಮೆಲ್ಲರಿಗೂ ಈ ಬಗ್ಗೆ ಮಾಹಿತಿಯನ್ನು ತಿಳಿಸುತ್ತೇನೆ ಎಂದು ಬರೆದಿದ್ದಾರೆ.

ಇಮ್ರಾನ್ ಖಾನ್ ಪಾಕಿಸ್ತಾನದ ಪ್ರಧಾನಿಯಾಗಿ ಇನ್ನೇನು ಕೆಲವೇ ದಿನಗಳಲ್ಲಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ. ಪಾಕ್ ನಲ್ಲಿ ಇಮ್ರಾನ್ ಹವಾ ಜೋರಾಗಿದೆ. ಅಲ್ಲದೆ ಪದಗ್ರಹಣ ಕಾರ್ಯಕ್ರಮಕ್ಕೆ ಗಣ್ಯಾತಿಗಣ್ಯರಿಗೂ ಅಹ್ವಾನ ನೀಡಲಾಗಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...