alex Certify
ಕನ್ನಡ ದುನಿಯಾ       Mobile App
       

Kannada Duniya

ಮಹಿಳೆ ಸತ್ತು 10 ದಿನಗಳ ಬಳಿಕ ಹೊಟ್ಟೆಯಿಂದ ಹೊರ ಬಂತು ಮಗು

ದಕ್ಷಿಣ ಆಫ್ರಿಕಾದಲ್ಲಿ ಮೃತ ಮಹಿಳೆಯೊಬ್ಬಳು ಮಗುವಿಗೆ ಜನ್ಮ ನೀಡಿದ್ದಾಳೆ. ದುರದೃಷ್ಟವಶಾತ್ ಆ ಮಗು ಬದುಕಿಲ್ಲ. ನೊಮ್ವೆಲಿಸೊ ಎಂಬ 33 ವರ್ಷದ ಮಹಿಳೆಗೆ ದಿಢೀರನೆ ಉಸಿರಾಟದ ಸಮಸ್ಯೆ ಕಾಣಿಸಿಕೊಂಡಿತ್ತು. ಅದಾಗಿ ಸ್ವಲ್ಪ ಹೊತ್ತಿನಲ್ಲೇ ಆಕೆ ಮೃತಪಟ್ಟಿದ್ದಾಳೆ.

ಅವಳ ದೇಹವನ್ನು ಕುಟುಂಬದವರು ದಾನ ಮಾಡಿದ್ದರು. 5 ಮಕ್ಕಳ ತಾಯಿಯಾಗಿದ್ದ ಆ ಮಹಿಳೆ ತುಂಬು ಗರ್ಭಿಣಿ ಅನ್ನೋದು ಯಾರ ಗಮನಕ್ಕೂ ಬಂದಿರಲಿಲ್ಲ. ಮಹಿಳೆಯ ಮೃತದೇಹವನ್ನು ಆಸ್ಪತ್ರೆಯ ಶವಾಗಾರದಲ್ಲಿ ಇಡಲಾಗಿತ್ತು. 10 ದಿನಗಳ ಬಳಿಕ ಹೊಟ್ಟೆಯಲ್ಲಿದ್ದ ಮಗು ಹೊರಕ್ಕೆ ಬಂದಿತ್ತು.

ಮಹಿಳೆಯ ಸಾವಿನ ಬಳಿಕ ಸ್ನಾಯುಗಳ ವಿಶ್ರಾಂತಿ ಹಾಗೂ ಬ್ಯಾಕ್ಟೀರಿಯಾ ಬೆಳವಣಿಗೆ ಮಗು ದೇಹದಿಂದ ಹೊರಬರಲು ಕಾರಣ ಅಂತಾ ವೈದ್ಯರು ಹೇಳಿದ್ದಾರೆ. ಮಹಿಳೆಯನ್ನು ಶವಸಂಸ್ಕಾರಕ್ಕೆ ಕೊಂಡೊಯ್ಯುವ ವೇಳೆ ಮೃತ ಶಿಶು ಪತ್ತೆಯಾಗಿದೆ. ಇಂಥದ್ದೊಂದು ಘಟನೆ ನಡೆದಿರುವುದು ಇದೇ ಮೊದಲು ಅಂತಾ ಆಸ್ಪತ್ರೆಯ ಸಿಬ್ಬಂದಿ ತಿಳಿಸಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...