alex Certify
ಕನ್ನಡ ದುನಿಯಾ       Mobile App
       

Kannada Duniya

ಅಂತ್ಯಸಂಸ್ಕಾರಕ್ಕೆ ಸಿದ್ಧವಾಗಿದ್ದ ಶವಕ್ಕೆ ಬಂತು ಜೀವ, ಆದ್ರೆ….

ಚೀನಾದ ಚೆನ್ ಎಂಬ ಮಹಿಳೆಯ ಪತಿ ಹುವಾಂಗ್ ಕ್ಯಾನ್ಸರ್ ನಿಂದ ಬಳಲುತ್ತಿದ್ದ. ಹಲವು ದಿನಗಳಿಂದ ಹಾಸಿಗೆ ಹಿಡಿದಿದ್ದ. ಆತನ ಉಸಿರಾಟ ಕ್ಷೀಣವಾಗಿ, ದೇಹ ನಿಶ್ಚಲವಾಗಿತ್ತು. ಹುವಾಂಗ್ ಸತ್ತಿದ್ದಾನೆ ಎಂದುಕೊಂಡು ಪತ್ನಿ ಚೆನ್ ಆತನನ್ನು ಶವಾಗಾರಕ್ಕೆ ಕಳಿಸಿದ್ದಾಳೆ.

ಅಲ್ಲಿ ಆತನ ಅಂತ್ಯಕ್ರಿಯೆಗೆ ಸಿದ್ಧತೆ ನಡೆಸಲಾಗ್ತಿತ್ತು. ಈ ವೇಳೆ ಹುವಾಂಗ್ ನ ತುಟಿಗಳು ಹಾಗೂ ಕೈಗಳಲ್ಲಿ ಚಲನೆ ಇರೋದನ್ನು ವೈದ್ಯರು ಗಮನಿಸಿದ್ದಾರೆ. ಕೂಡಲೇ ಆತನಿಗೆ ಚಿಕಿತ್ಸೆ ನೀಡಲು ಉಪಕರಣಗಳನ್ನು ತರುವಂತೆ ವೈದ್ಯರು ಸೂಚಿಸಿದ್ರು.

ಆದ್ರೆ ಅಷ್ಟರಲ್ಲಿ ಹುವಾಂಗ್ ನ ಪ್ರಾಣಪಕ್ಷಿ ಹಾರಿಹೋಗಿದೆ. ಆಗ ಆತ ನಿಜವಾಗಿಯೂ ಸತ್ತಿದ್ದ. ಇಂಥದ್ದೊಂದು ಘಟನೆ ನಡೆದಿರೋದು ಇದೇ ಮೊದಲು ಅಂತಾ ವೈದ್ಯರು ತಿಳಿಸಿದ್ದಾರೆ. ಇನ್ನು ಪತಿಯ ಸಾವಿಗೂ ಮುನ್ನವೇ ಶವಾಗಾರಕ್ಕೆ ಕಳಿಸಿದ್ದೇನೆ ಅನ್ನೋ ಪಾಪಪ್ರಜ್ಞೆ ಚೆನ್ ಳನ್ನು ಕಾಡ್ತಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...