alex Certify
ಕನ್ನಡ ದುನಿಯಾ       Mobile App
       

Kannada Duniya

2 ತಿಂಗಳ ನಂತ್ರ ಸಮಾಧಿಯಿಂದ ತೆಗೆದ ಬೌದ್ಧ ಸನ್ಯಾಸಿ ಶವ ನೋಡಿ ದಂಗಾದ ಜನ

ವ್ಯಕ್ತಿ ಸಾವನ್ನಪ್ಪಿದ ಎರಡು ತಿಂಗಳಲ್ಲಿ ಸಮಾಧಿಯಲ್ಲಿರುವ ದೇಹ ಮಣ್ಣಾಗಿರುತ್ತದೆ. ಆದ್ರೆ ಸಮಾಧಿ ಮಾಡಿ ಎರಡು ತಿಂಗಳ ನಂತ್ರವೂ ಶವ ಹೂಳಿದ ದಿನ ಹೇಗಿತ್ತೋ ಈಗ್ಲೂ ಹಾಗೆ ಇದೆ ಅಂದ್ರೆ ನಂಬ್ತೀರಾ?  ಥೈಲ್ಯಾಂಡ್ ನಲ್ಲಿ ಇಂಥಹ ಆಶ್ಚರ್ಯಕರ ಘಟನೆ ನಡೆದಿದೆ.

ಬೌದ್ಧ ಸಂತರ ಶವವೊಂದು ಸಮಾಧಿ ಮಾಡಿ ಎರಡು ತಿಂಗಳಾದ್ರೂ ಹಾಳಾಗಿಲ್ಲ. ಶವದ ಕೆಲ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಇದನ್ನು ನೋಡಿ ಜನರು ಆಶ್ಚರ್ಯಕ್ಕೊಳಗಾಗಿದ್ದಾರೆ. ಬೌದ್ಧರ ಗುರು ಲುವಾಂಗ್ ಪೋರ್ ಪಿಯಾನಾ ಎರಡು ತಿಂಗಳ ಹಿಂದೆ ಇಹಲೋಕ ತ್ಯಜಿಸಿದ್ದರು. ಅವರಿಗೆ 92 ವರ್ಷ ವಯಸ್ಸಾಗಿತ್ತು.

ಇತ್ತೀಚಿಗೆ ವಿಶೇಷ ಕಾರ್ಯಕ್ರಮವೊಂದಕ್ಕಾಗಿ ಅವರ ಶವವನ್ನು ಹೊರಗೆ ತೆಗೆಯಲಾಗಿತ್ತು. ಶವ ನೋಡಿದ ಭಕ್ತರು ಹಾಗೂ ಸನ್ಯಾಸಿಗಳು ಆಶ್ಚರ್ಯಕ್ಕೊಳಗಾಗಿದ್ದಾರೆ. ಲುವಾಂಗ್ ಶವದ ಮುಖದಲ್ಲಿ ನಗು ಸ್ಪಷ್ಟವಾಗಿ ಕಾಣ್ತಿದೆ. ಈ ನಗು ಅವರಿಗೆ ಮೋಕ್ಷ ಸಿಕ್ಕಿದೆ ಎಂಬುದರ ಸಂಕೇತವೆಂದು ಶಿಷ್ಯರು ಹೇಳಿದ್ದಾರೆ.

 

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...