alex Certify
ಕನ್ನಡ ದುನಿಯಾ       Mobile App
       

Kannada Duniya

ಒಡೆದ ಮನೆಯಾಗಿದೆ ಭೂಗತ ಪಾತಕಿಯ ಡಿ ಗ್ಯಾಂಗ್

ಭೂಗತ ಪಾತಕಿ ದಾವೂದ್ ಇಬ್ರಾಹಿಂ ಮತ್ತವನ ಬಲಗೈ ಬಂಟ ಛೋಟಾ ಶಕೀಲ್ ಮಧ್ಯೆ ವಿರಸ ಮೂಡಿದೆ ಅಂತಾ ಹೇಳಲಾಗ್ತಿದೆ. ಪಾಕಿಸ್ತಾನದ ಕರಾಚಿಯಲ್ಲಿ ಇಬ್ಬರೂ ಬೇರೆ ಬೇರೆ ಮನೆಗಳಲ್ಲಿ ವಾಸ ಮಾಡ್ತಿದ್ದಾರಂತೆ. ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್ಐ ಈಗ ಇಬ್ಬರು ಪಾತಕಿಗಳ ಸಂಧಾನಕ್ಕಾಗಿ ಸರ್ಕಸ್ ಮಾಡ್ತಿದೆ.

ಕಳೆದ ಮೂರು ದಶಕಗಳಿಂದ್ಲೂ ದಾವೂದ್ ಇಬ್ರಾಹಿಂ ಹಾಗೂ ಚೋಟಾ ಶಕೀಲ್ ದೇಹ ಎರಡು ಆದ್ರೆ ಉಸಿರು ಒಂದೇ ಎಂಬಂತಿದ್ರು. ಡಿ ಕಂಪನಿ ಮಾಲೀಕನ ವಿಶ್ವಾಸ ಗಳಿಸಿದ್ದ ಚೋಟಾ ಶಕೀಲ್, ಬಲಗೈ ಬಂಟನಾಗಿದ್ದ. ದಾವೂದ್ ಹೇಳಿದ ಕೆಲಸವನ್ನು ಚಾಚೂ ತಪ್ಪದೆ ಮಾಡುತ್ತಿದ್ದ.

ಆದ್ರೆ ದಾವೂದ್ ಸಹೋದರ ಅನೀಸ್ ಇಬ್ರಾಹಿಂ ವಿಚಾರಕ್ಕೆ ಇಬ್ಬರ ಮಧ್ಯೆ ಭಿನ್ನಾಭಿಪ್ರಾಯ ತಲೆದೋರಿದೆ. ಅನೀಸ್ ಇಬ್ರಾಹಿಂ ಡಿ ಗ್ಯಾಂಗ್ ನ ಕಾರ್ಯಾಚರಣೆಗಳಲ್ಲಿ ತಲೆ ತೂರಿಸೋದು ಚೋಟಾ ಶಕೀಲ್ ಗೆ ಇಷ್ಟವಿರಲಿಲ್ಲ. ತನ್ನನ್ನೇ ಮೀರಿಸಲು ಆತ ಯತ್ನಿಸುತ್ತಿದ್ದಾನೆ ಅನ್ನೋ ಬೇಸರವೂ ಇತ್ತು. ಇದೇ ಕಾರಣಕ್ಕೆ ದಾವೂದ್ ಮೇಲೆ ಚೋಟಾ ಶಕೀಲ್ ಮುನಿಸಿಕೊಂಡಿದ್ದಾನೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...