alex Certify
ಕನ್ನಡ ದುನಿಯಾ       Mobile App
       

Kannada Duniya

ಕರಾಚಿ ನಂಬರ್ ಗೆ ಕರೆ ಮಾಡಿದ್ರೆ ಹಲೋ ಎಂದ ದಾವೂದ್

dawood

ಭಾರತಕ್ಕೆ ಬೇಕಾಗಿರುವ ಭೂಗತ ಪಾತಕಿ ದಾವೂದ್ ಇಬ್ರಾಹಿಂ ಪಾಕಿಸ್ತಾನದಲ್ಲೇ ಅಡಗಿದ್ದಾನೆ ಅನ್ನೋದು ಇಡೀ ಜಗತ್ತಿಗೇ ಗೊತ್ತಿರುವ ಸತ್ಯ. ಆದ್ರೆ ಪಾಕಿಸ್ತಾನ ಮಾತ್ರ ಅದನ್ನು ಒಪ್ಪಿಕೊಳ್ಳಲು ಸಿದ್ಧವಿಲ್ಲ. ಈಗ ಖುದ್ದು ದಾವೂದ್ ಪತ್ರಕರ್ತನಿಗೆ ಸಿಕ್ಕಿಹಾಕಿಕೊಂಡಿದ್ದಾನೆ.

ಭಾರತದ ಖಾಸಗಿ ಸುದ್ದಿ ವಾಹಿನಿಯ ವರದಿಗಾರನೊಬ್ಬ ನೇರವಾಗಿ ದಾವೂದ್ ನ ಕರಾಚಿ ನಂಬರ್ ಗೆ ಕರೆ ಮಾಡಿದ್ದ. ದಾವೂದ್ ಇಬ್ರಾಹಿಂ ಫೋನ್ ಎತ್ತಿಕೊಂಡು ಯಾರು ಅಂತಾ ಪ್ರಶ್ನಿಸಿದ್ದಾನೆ. ನೀವು ದಾವೂದ್ ಅಲ್ಲವೇ? ನಿಮ್ಮನ್ನು ಸಂದರ್ಶನ ಮಾಡಬೇಕಿತ್ತು ಎಂದಿದ್ದಾನೆ ವರದಿಗಾರ.

ತಾನೇ ಫೋನ್ ರಿಸೀವ್ ಮಾಡಿ ಸಿಕ್ಕಿಹಾಕಿಕೊಂಡಿದ್ದೇನೆ ಅನ್ನೋದು ಅರಿವಾಗ್ತಿದ್ದಂತೆ, ತಾನು ದಾವೂದ್ ಅಲ್ಲ ಜಾವೇದ್ ಛೋಟಾನಿ ಅಂತಾ ಸುಳ್ಳು ಹೇಳಿದ್ದಾನೆ. ಛೋಟಾನಿ ದುಬೈನಲ್ಲಿ ದಾವೂದ್ ದಂಧೆ ನೋಡಿಕೊಳ್ಳುತ್ತಾನೆ. ಕೂಡಲೇ ದಾವೂದ್ ಫೋನ್ ಅನ್ನು ಛೋಟಾನಿ ಕೈಗೆ ಕೊಟ್ಟುಬಿಟ್ಟ.

ನಂತರ ಛೋಟಾನಿ ಇಷ್ಟೊತ್ತು ಮಾತನಾಡಿದ್ದು ತಾನೇ ಎಂಬಂತೆ ಬಿಂಬಿಸಿದ್ದಾನೆ. ದಾವೂದ್ ಕರಾಚಿಯಲ್ಲಿಲ್ಲ, ಇದು ಪಾಕಿಸ್ತಾನದ ಫೋನ್ ನಂಬರ್ ಅಲ್ಲ ಅಂತೆಲ್ಲಾ ಸುಳ್ಳು ಹೇಳಿದ್ದಾನೆ. ಈ ನಂಬರ್ ಡಿಲೀಟ್ ಮಾಡು, ನಿನ್ನ ನಂಬರ್ ಕೊಡು ದಾವೂದ್ ಗೆ ತಿಳಿಸ್ತೇನೆ ಅಂತಾ ಹೇಳಿದ್ದಾನೆ.

ಕೊನೆಗೆ ತನ್ನ ನಂಬರ್ ಕೊಟ್ಟ ವರದಿಗಾರ, ಕರಾಚಿಗೆ ಕ್ಯಾಮರಾ ಕಳಿಸ್ಲಾ ಅಂತ ಕೇಳಿದ್ದ. ಬೇಡ ನಿಮ್ಮ ಸ್ಟುಡಿಯೋಗೆ ಬಂದು ಸಂದರ್ಶನ ಕೊಡ್ತೇವೆ ಎಂದ ಛೋಟಾನಿ ಫೋನ್ ಕೆಳಗಿಟ್ಟಿದ್ದಾನೆ. ಹೀಗೆ 19 ನಿಮಿಷಗಳ ಸಂಭಾಷಣೆ ರೆಕಾರ್ಡ್ ಆಗಿದೆ. ದಾವೂದ್ ಕರಾಚಿಯಲ್ಲೇ ಇದ್ದಾನೆ ಅನ್ನೋದಕ್ಕೆ ಮತ್ತೊಂದು ಸಾಕ್ಷ್ಯ ಸಿಕ್ಕಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...