alex Certify
ಕನ್ನಡ ದುನಿಯಾ       Mobile App
       

Kannada Duniya

ದಾವುದ್ ಇಬ್ರಾಹಿಂ ನಮ್ಮಲ್ಲಿಲ್ಲ ಎಂದ ಪಾಕ್

547920041-Dawood-Ibrahim_6

ಭಾರತಕ್ಕೆ ಬೇಕಾಗಿರುವ ಮೋಸ್ಟ್ ವಾಂಟೆಡ್ ಕ್ರಿಮಿನಲ್ 1993 ರ ಮುಂಬೈ ಸರಣಿ ಸ್ಫೋಟದ ರೂವಾರಿ ದಾವುದ್ ಇಬ್ರಾಹಿಂ ನಮ್ಮ ದೇಶದಲ್ಲಿ ಇಲ್ಲ ಎಂದು ಮತ್ತೊಮ್ಮೆ ಪಾಕಿಸ್ತಾನ ಹಳೆ ರಾಗವನ್ನೇ ಹಾಡಿದೆ.

ಸರಣಿ ಸ್ಫೋಟದ ನಂತರ ಭಾರತದಿಂದ ಪರಾರಿಯಾಗಿ ಪಾಕಿಸ್ತಾನದಲ್ಲಿ ದಾವುದ್ ನೆಲೆಸಿದ್ದಾನೆ ಎಂಬುದಕ್ಕೆ ಈಗಾಗಲೇ ಸಾಕಷ್ಟು ಸಾಕ್ಷಿಗಳು ಲಭಿಸಿದ್ದು, ಆದರೂ ಸಹ ಪಾಕಿಸ್ತಾನ ಮಾತ್ರ ಆತ ನಮ್ಮಲ್ಲಿಲ್ಲ ಎಂಬ ಮೊಂಡು ವಾದ ಮಂಡಿಸುತ್ತಿದೆ.

ಈ ನಡುವೆ ದಾವುದ್ ಇಬ್ರಾಹಿಂ ವಿರುದ್ಧ ಇಂಟರ್‌ ಪೋಲ್ ಬಂಧನದ ವಾರೆಂಟ್ ಹೊರಡಿಸಿದ ಹಿನ್ನೆಲೆಯಲ್ಲಿ, ಇಂಗ್ಲೆಂಡ್‌ ನಲ್ಲಿರುವ ದಾವುದ್ ಆಸ್ತಿಯನ್ನು ವಶಕ್ಕೆ ತೆಗೆದುಕೊಳ್ಳಲಾಗಿದ್ದು, ಹಲವಾರು ಖಾತೆಗಳನ್ನು ವಶಕ್ಕೆ ತೆಗೆದುಕೊಂಡು ಆರ್ಥಿಕ ನಿರ್ಬಂಧವನ್ನೂ ಹೇರಲಾಗಿದೆ. ಅಷ್ಟೇ ಅಲ್ಲ, ಇಂಗ್ಲೆಂಡ್‌ ನಲ್ಲಿರುವ ಬ್ಯಾಂಕ್ ಖಾತೆಗಳಿಗೆ ದಾವುದ್, ಪಾಕಿಸ್ತಾನದ ನಾಲ್ಕು ವಿಳಾಸಗಳನ್ನು ನೀಡಿದ್ದು ಅವುಗಳಲ್ಲಿ ನಾಲ್ಕು ವಿಳಾಸಗಳೂ ಕರಾಚಿ ನಗರಕ್ಕೆ ಸಂಬಂಧಿಸಿರುವುದರಿಂದ ಆತ ಪಾಕ್ ನಲ್ಲಿಯೇ ಇದ್ದಾನೆ ಎಂಬುದಕ್ಕೆ ಮತ್ತೊಂದು ಸಾಕ್ಷ್ಯ ಲಭಿಸಿದಂತಾಗಿದೆ.

ಅಷ್ಟೇ ಅಲ್ಲ, ಇತ್ತೀಚೆಗಷ್ಟೇ ಪಾಕ್ ಪ್ರಧಾನಿ ನವಾಜ್ ಷರೀಫ್ ಅವರ ಹುಟ್ಟು ಹಬ್ಬದ ಸಮಯದಲ್ಲಿಯೂ ಅವರ ಮನೆಗೆ ಭೇಟಿ ನೀಡಿದ್ದ ಎಂಬ ಮಾಹಿತಿಯೂ ಇದ್ದು, ಆದರೂ ಸಹ ಪಾಕ್ ದಾವುದ್ ನಮ್ಮಲ್ಲಿಲ್ಲ ಎನ್ನುತ್ತಿರುವುದು ಭಾರತದ ಆಕ್ರೋಶಕ್ಕೆ ಕಾರಣವಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...