alex Certify
ಕನ್ನಡ ದುನಿಯಾ       Mobile App
       

Kannada Duniya

ದೇವಾಸ್ ಶೃಂಗಸಭೆಗೂ ಮುನ್ನ ಹಿಮಪಾತದ ಮಧ್ಯೆ ಮೋದಿ

ಪ್ರಧಾನ ಮಂತ್ರಿ ನರೇಂದ್ರ ಮೋದಿ ದೇವಾಸ್ ಆರ್ಥಿಕ ವೇದಿಕೆ ಶೃಂಗಸಭೆಯಲ್ಲಿ ಪಾಲ್ಗೊಂಡಿದ್ದಾರೆ. ಶೃಂಗಸಭೆಯನ್ನು ಉದ್ಘಾಟಿಸಲಿರುವ ಮೋದಿ ಮೊದಲ ಸೆಷನ್ಸ್ ನಲ್ಲಿ ಮಾತನಾಡಲಿದ್ದಾರೆ. ಇದಕ್ಕೂ ಮುನ್ನ ವಿಶ್ವದ ದೊಡ್ಡ ದೊಡ್ಡ ಕಂಪನಿಗಳ ಸಿಇಓ ಜೊತೆ ಮೋದಿ ಸಭೆ ನಡೆಸಿದ್ದಾರೆ. ಸಭೆಯಲ್ಲಿ ಭಾರತದ ಅರ್ಥ ಹೇಳಿದ ಮೋದಿ ಭಾರತವೆಂದ್ರೆ ಬ್ಯುಸಿನೆಸ್ ಎಂದಿದ್ದಾರೆ.

ದೇವಾಸ್ ನಲ್ಲಿ ಎರಡು ದಿನಗಳಿಂದ ಭಾರೀ ಹಿಮಪಾತವಾಗ್ತಿದೆ. ಜನರು ಈ ಹಿಮಪಾತವನ್ನು ಎಂಜಾಯ್ ಮಾಡ್ತಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಕೂಡ ಇದ್ರಲ್ಲಿ ಹಿಂದೆ ಬಿದ್ದಿಲ್ಲ. ಸೋಮವಾರವೇ ದೇವಾಸ್ ತಲುಪಿರುವ ಮೋದಿ ಹಿಮದ ಮಧ್ಯೆ ಕೆಲ ಸಮಯ ಕಳೆದಿದ್ದಾರೆ.

ಮೋದಿ ತಮ್ಮ ಅಧಿಕೃತ ಇನ್ಸ್ಟ್ರಾಗ್ರಾಮ್ ಅಕೌಂಟ್ ನಲ್ಲಿ ಫೋಟೋವೊಂದನ್ನು ಹಾಕಿದ್ದಾರೆ. ಮೋದಿ ಹಿಂದೆ ಭಾರೀ ಹಿಮವನ್ನು ಫೋಟೋದಲ್ಲಿ ನೋಡಬಹುದಾಗಿದೆ. ವಿಶ್ವ ಆರ್ಥಿಕ ವೇದಿಕೆ ವಾರ್ಷಿಕ ಸಭೆಯಲ್ಲಿ ಪಾಲ್ಗೊಳ್ಳಲು ಸ್ವಿಟ್ಜರ್ಲೆಂಡ್ ನಲ್ಲಿದ್ದೇನೆ. ಇಲ್ಲಿ ನಾನು ವಿಶ್ವದ ನಾಯಕರು ಹಾಗೂ ವ್ಯವಹಾರಗಳ ಬಗ್ಗೆ ವಿಶೇಷ ತಜ್ಞರ ಜೊತೆ ಮಾತನಾಡಲಿದ್ದೇನೆ ಎಂದು ಮೋದಿ ಶೀರ್ಷಿಕೆ ಹಾಕಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...