alex Certify
ಕನ್ನಡ ದುನಿಯಾ       Mobile App
       

Kannada Duniya

ಈ ಚಿತ್ರ ಹರಾಜಾದ ಬೆಲೆ ಕೇಳಿದರೆ ದಂಗಾಗ್ತೀರಾ….!

ಬ್ರಿಟಿಷ್ ಚಿತ್ರ ಕಲಾವಿದರ ಪೈಕಿ ಜೀವಂತ ದಂತಕತೆ ಎನಿಸಿಕೊಂಡ ಡೇವಿಡ್ ಹಾಕ್ನೆಯವರ ಈಜುಕೊಳದ ಚಿತ್ರ ಗುರುವಾರ ನ್ಯೂಯಾರ್ಕ್ ನಲ್ಲಿ 90 ಮಿಲಿಯನ್ ಡಾಲರ್ ಗೆ ಮಾರಾಟವಾಗಿದೆ.

ಬಿಡ್ ಆರಂಭವಾದ ಒಂಬತ್ತೇ ನಿಮಿಷದಲ್ಲಿ ಈ ಅತಿದೊಡ್ಡ ಮೊತ್ತಕ್ಕೆ ಚಿತ್ರ ಬಿಕರಿಯಾಯಿತು. ಅಲ್ಲದೇ ಇದೊಂದು ದಾಖಲೆ ಹರಾಜಾದ ಬೆಲೆ ಎಂದು ಹೇಳಲಾಗುತ್ತಿದೆ. ಅಚ್ಚರಿ ಎಂದರೆ ಇಬ್ಬರು ಟೆಲಿಫೋನಿಕ್ ಬಿಡ್ಡುದಾರರ ನಡುವೆ ಪೈಪೋಟಿ ನಡೆದು ದಾಖಲೆ ಮೊತ್ತಕ್ಕೆ ಅಂತಿಮಗೊಂಡಿದೆ.

ಈ ಹಿಂದೆ ಅಮೆರಿಕಾ ಕಲಾವಿದ ಜೆಫ್ ಕೂನ್ಸ್ ಅವರ ಬಲೂನ್ ಡಾಗ್ ಚಿತ್ರ 2013 ರಲ್ಲಿ 58 ಮಿಲಿಯನ್ ಡಾಲರ್ ಗೆ ಹರಾಜಾಗಿತ್ತು. ಈ ದಾಖಲೆ ಇದೀಗ ಮುರಿಯಲ್ಪಟ್ಟಿದೆ.

ಕಲಾವಿದ ಡೇವಿಡ್ ಹಾಕ್ನೆಯವರು ಈ ಮೊತ್ತ ಕಂಡು ಚಕಿತರಾಗಿದ್ದು, ತಮ್ಮ ಚಿತ್ರಗಳು ಹಿಂದೆ ಮಾರಾಟವಾದ ಮೊತ್ತದ ಬಗ್ಗೆ ವಿವರಣೆ ನೀಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...